ನೊಂದಿದ್ದೇನೆ: ಆರ್‌ಸಿಬಿ ಅಭಿಮಾನಿ

Team Udayavani, May 14, 2019, 6:00 AM IST

ಬೆಂಗಳೂರು: ಮೇ4ರಂದು ಬೆಂಗಳೂರಿನಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು-ಸನ್‌ ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿ ಹುಡುಗಿಯೊಬ್ಬಳು ಟೀವಿ ನೇರ ಪ್ರಸಾರದ ವೇಳೆ ಸುಮಾರು 5 ಸೆಕೆಂಡ್ಸ್‌ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದರು. ಟೀವಿಯಲ್ಲಿ ಕಾಣಿಸಿಕೊಂಡ ಆ ಸುಂದರ ಹುಡುಗಿ ಯಾರು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಹುಡುಕಾಟ ನಡೆದಿತ್ತು.

ಒಂದೇ ದಿನದಲ್ಲಿ ಆ ಹುಡುಗಿಗೆ ಸಾಮಾಜಿಕ ಜಾಲತಾಣದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯ ವಾರಿಯರ್‌ ಮಾದರಿಯಲ್ಲಿ ಸುಮಾರು 1.50 ಲಕ್ಷ ಜನರಿಂದ ಹುಡುಕಾಟ ನಡೆದಿತ್ತು. ಇದೀಗ ಆ ಹುಡುಗಿ ಮೌನ ಮುರಿದು ಮಾತನಾಡಿದ್ದಾರೆ. ‘ನಾನು ಸೆಲೆಬ್ರಿಟಿ ಅಲ್ಲ. ನಾನೊಬ್ಬಳು ಸಾಮಾನ್ಯ ಹುಡುಗಿ, ಹೇಳಿಕೊಳ್ಳುವ ಏನೂ ಸಾಧನೆ ಮಾಡಿಲ್ಲ. ಕೇವಲ ಪಂದ್ಯ ನೋಡಲು ಅಷ್ಟೇ ಬಂದಿದ್ದೆ. ಆದರೆ ಟೀವಿಯಲ್ಲಿ ಪ್ರಸಾರವಾದ ಬಳಿಕ ನನಗೆ ವ್ಯಾಪಕ ಪ್ರಚಾರ ಸಿಕ್ಕಿತು. ಇದೀಗ ಫೇಸ್‌ಬುಕ್‌, ಟ್ವೀಟರ್‌ ಖಾತೆಗೆ ಕೆಲವು ಅಶ್ಲೀಲ ಕಾಮೆಂಟ್‌ಗಳು ಕೂಡ ಬರಲಾರಂಭಿಸಿವೆ. ಜತೆಗೆ ನನ್ನ ಖಾಸಗಿ ತನಕ್ಕೂ ಧಕ್ಕೆ ಯಾಗುತ್ತಿದೆ. ಇದರಿಂದ ನಾನು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದೇನೆ ಎಂದಿದ್ದಾರೆ.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ