ರಾಜಸ್ಥಾನ್‌-ಮುಂಬೈ ಮತ್ತೆ ಮುಖಾಮುಖಿ

Team Udayavani, Apr 20, 2019, 6:00 AM IST

ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌-ಮುಂಬೈ “ಸವಾಯ್‌ ಮನ್‌ಸಿಂಗ್‌’ ಸ್ಟೇಡಿಯಂನಲ್ಲಿ ಖಾಮುಖಿಯಾಗಲಿವೆ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ ಜಯಿಸಿರುವ ರಾಜಸ್ಥಾನ್‌ 2ನೇ ಗೆಲುವಿಗೆ ಕಣ್ಣಿಟ್ಟಿದೆ. ಇತ್ತ ತವರಿನಲ್ಲಿ ರಾಜಸ್ಥಾನ್‌ ವಿರುದ್ಧ ಮುಗ್ಗರಿಸಿರುವ ಮುಂಬೈ ಜೈಪುರದಲ್ಲಿ ರಾಜಸ್ಥಾನ್‌ಗೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ.

ಮುಂಬೈಯೇ ಮುಂದೆ
ಐಪಿಎಲ್‌ನಲ್ಲಿ ಎರಡೂ ತಂಡಗಳು 22 ಬಾರಿ ಮುಖಾಮುಖೀಯಾಗಿದ್ದು, ಮುಂಬೈ 11ರಲ್ಲಿ ಜಯಿಸಿದೆ. ರಾಜಸ್ಥಾನ್‌ 10ರಲ್ಲಿ ಗೆದ್ದಿದೆ. ಒಂದು ಪಂದ್ಯ ಮಾತ್ರ ಮಳೆಯಿಂದ ರದ್ದಾಗಿದೆ.

ರಾಜಸ್ಥಾನ್‌ನಲ್ಲಿಲ್ಲ ಸಂಘಟಿತ ಪ್ರದರ್ಶನ
6 ಸೋಲು, ಎರಡು ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿರುವ ಆತಿಥೇಯ ರಾಜಸ್ಥಾನ್‌ ಮತ್ತೆ ಟ್ರ್ಯಾಕ್‌ಗೆ ಮರುಳಲು ಮುಂಬೈ ವಿರುದ್ಧದ ಪಂದ್ಯ ಗೆಲ್ಲುವುದು ಅನಿವಾರ್ಯ. ಕಳೆದ ಶನಿವಾರ ವಾಂಖೇಡೆ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯದ ಉತ್ಸಾಹ ರಾಜಸ್ಥಾನ್‌ ತಂಡದಲ್ಲಿದ್ದರೂ ತವರಿನ ಪಂದ್ಯ ಕೈಹಿಡಿಯುವುದೇ ಎಂಬುದು ನಿಗೂಢ. ತವರಿನಲ್ಲಿ 4 ಪಂದ್ಯಗಳನ್ನಾಡಿರುವ ರಾಜಸ್ಥಾನ್‌ 3 ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೀಗಾಗಿ ತವರಿನ ಆಟ ರಾಜಸ್ಥಾನ್‌ ಪರವಾಗಿಲ್ಲ.

ರನ್‌ಗಾಗಿ ಪರದಾಟ
ಆಟಗಾರರಲ್ಲಿ ಸ್ಥಿರ ಪ್ರದರ್ಶನ ಬರದಿರು ವುದು ತಂಡಕ್ಕೆ ಮುಳುವಾಗಿ ಪರಿಣಮಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಜಾಸ್‌ ಬಟ್ಲರ್‌ ಹೊರತು ಪಡಿಸಿ ಉಳಿದೆಲ್ಲ ಬ್ಯಾಟ್ಸ್‌ ಮನ್‌ಗಳು ರನ್‌ಗಳಿಗೆ ಪರದಾಡಿದ್ದರು. ಸಂಜು ಸ್ಯಾಮ್ಸನ್‌, ನಾಯಕ ಅಜಿಂಕ್ಯ ರಹಾನೆ ಒಂದು ಪಂದ್ಯದಲ್ಲಿ ಮಿಂಚಿದರೆ ಇನ್ನೊಂದು ಪಂದ್ಯದಲ್ಲಿ ಎಡವುತ್ತಿದ್ದಾರೆ. ಪಂಜಾಬ್‌ ವಿರುದ್ಧದ ಹಿಂದಿನ ಪಂದ್ಯದಲ್ಲಿ 182 ರನ್‌ ಗುರಿ ತಲುಪಲು ಹೆಣಗಾಡಿದ್ದು ಇದಕ್ಕೆ ಉತ್ತಮ ನಿದರ್ಶನ. ಬೌಲಿಂಗ್‌ನಲ್ಲೂ ಹೇಳಿಕೊಳ್ಳುವಷ್ಟು ರಾಜಸ್ಥಾನ್‌ ಬಲಿಷ್ಠವಾಗಿಲ್ಲ. ಜೋಫ‌ ಆರ್ಚರ್‌, ಶ್ರೇಯಸ್‌ ಗೋಪಾಲ್‌ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಉಳಿದ ಬೌಲರ್‌ಗಳಿಂದ ಯಾವುದೇ ಸಾಥ್‌ ದೊರೆಯುತ್ತಿಲ್ಲ. ಈ ಎಲ್ಲ ತಪ್ಪುಗಳನ್ನು ಅರ್ಥೈಸಿಕೊಂಡು ಅಂಗಳಕ್ಕಿಳಿದರೇ ರಾಜಸ್ಥಾನಕ್ಕೆ ಗೆಲುವು ಕಷ್ಟವೇನಲ್ಲ.

ಮುಂಬೈ ಬಲಿಷ್ಠ
ಇತ್ತ ಬಿಗ್‌ ಹಿಟ್ಟರ್, ಉತ್ತಮ ಬೌಲರ್ ಮತ್ತು ಪರಿಪೂರ್ಣ ಆಲ್‌ರೌಂಡರ್‌ಗಳನ್ನು ಒಳಗೊಂಡಿರುವ ಮುಂಬೈ ತಂಡ ಬಲಿಷ್ಠವಾಗಿದೆ. 3 ಬಾರಿಯ ಚಾಂಪಿಯನ್ಸ್‌ ಗುರುವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 40 ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಗೆಲುವಿನ ಲಯವನ್ನು ಮುಂಬೈ ಮುಂದುವರಿಸುವ ತವಕದಲ್ಲಿದೆ. ರೋಹಿತ್‌ ಶರ್ಮ, ಕ್ವಿಂಟನ್‌ ಡಿ ಕಾಕ್‌ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರೇ ಪಾಂಡ್ಯ ಸಹೋದರರಾದ ಹಾರ್ದಿಕ್‌-ಕೃಣಾಲ್‌, ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ತಂಡವನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಬುಮ್ರಾ, ಲಸಿತ ಮಾಲಿಂಗ, ರಾಹುಲ್‌ ಚಹರ್‌ ತಂಡಕ್ಕೆ ಬಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ