ಐಪಿಎಲ್‌ಗೆ ಮತ್ತೂಬ್ಬ ಕನ್ನಡಿಗ

Team Udayavani, Apr 15, 2019, 9:49 AM IST

ಆರ್‌ಸಿಬಿಯಲ್ಲಿ ಕರ್ನಾಟಕದ ಕ್ರಿಕೆಟಿಗರು ಕಣ್ಣಿಗೆ ಕಾಣುತ್ತಿಲ್ಲವಾದರೂ ರಾಜ್ಯದ ಸಾಕಷ್ಟು ಮಂದಿ ಕ್ರಿಕೆಟಿಗರು ವಿವಿಧ ತಂಡಗಳಲ್ಲಿ  ಆಡುತ್ತಿರುವುದನ್ನು ಗಮನಿಸಬಹುದು. ಈಗ ಇವರ ಸಾಲಿಗೆ ಕರ್ನಾಟಕದ ಎಡಗೈ ಸ್ಪಿನ್ನರ್‌ ಜಗದೀಶ್‌ ಸುಚಿತ್‌ ಕೂಡ ಸೇರ್ಪಡೆಗೊಂಡಿದ್ದಾರೆ. ಇವರಿನ್ನು ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿದ್ದಾರೆ.

ಗಾಯಾಳು ಬೌಲರ್‌ ಹರ್ಷಲ್‌ ಪಟೇಲ್‌ ಐಪಿಎಲ್‌ನಿಂದ ಬೇರ್ಪಟ್ಟ ಕಾರಣ ಈ ಸ್ಥಾನಕ್ಕೆ ಜಗದೀಶ್‌ ಸುಚಿತ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಜೆ. ಸುಚಿತ್‌ ಈ ವರೆಗೆ ಒಮ್ಮೆಯಷ್ಟೇ ಸಂಪೂರ್ಣ ಐಪಿಎಲ್‌ ಋತುವಿನಲ್ಲಿ ಆಡಿದ್ದರು. ಅದು 2015ರ ಪಂದ್ಯಾವಳಿಯಾಗಿದ್ದು, ಸುಚಿತ್‌ ಮುಂಬೈ ಇಂಡಿಯನ್ಸ್‌ ಪರ 13 ಪಂದ್ಯಗಳನ್ನಾಡಿ 10 ವಿಕೆಟ್‌ ಉರುಳಿಸಿದ್ದರು. ಅಂದು ಮುಂಬೈ 10 ಲಕ್ಷ ರೂ.ಗೆ ಇವರನ್ನು ಕೊಂಡುಕೊಂಡಿತ್ತು.

2016ರಲ್ಲಿ ಮುಂಬೈ ತಂಡದಲ್ಲೇ ಉಳಿದರೂ ಸುಚಿತ್‌ಗೆ ಆಡುವ ಅವಕಾಶ ಸಿಗಲಿಲ್ಲ. ಅನಂತರದ 2 ಹರಾಜುಗಳಲ್ಲಿ ಮಾರಾಟವಾಗದೇ ಉಳಿದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ