ಧೋನಿ -ಪರಾಗ್‌: ಒಂದು ಚಿತ್ರದ ಸ್ವಾರಸ್ಯ

Team Udayavani, Apr 16, 2019, 9:53 AM IST

ಚೆನ್ನೈ: ಹನ್ನೊಂದು ವರ್ಷಗಳ ಹಿಂದಿನ ಕತೆ. ಅಂದು ಅಭಿಮಾನಿ ಬಾಲಕನೊಬ್ಬ ಧೋನಿ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದ. ಇಂದು ಅದೇ ಹುಡುಗ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡುವ ಮೂಲಕ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದಾನೆ. ಹೆಸರು ರಿಯಾನ್‌ ಪರಾಗ್‌. ವಯಸ್ಸು 17 ವರ್ಷ. ರಾಜಸ್ಥಾನ್‌ ರಾಯಲ್ಸ್‌ ತಂಡದ ಆಟಗಾರ.

ಚೆನ್ನೈ ವಿರುದ್ಧ ಎ. 13ರಂದು ನಡೆದ ಪಂದ್ಯದಲ್ಲಿ ಪರಾಗ್‌ ಆಡಿದ್ದರು. ವಿಶೇಷವೆಂದರೆ, ರಿಯಾನ್‌ 16 ರನ್‌ ಗಳಿಸಿದ್ದಾಗ ಧೋನಿಯೇ ವಿಕೆಟ್‌ ಹಿಂದೆ ಕ್ಯಾಚ್‌ ಪಡೆಯುವ ಮೂಲಕ ಪೆವಿಲಿಯನ್‌ ದಾರಿ ತೋರಿಸಿದ್ದರು.
ರಿಯಾನ್‌ ಪರಾಗ್‌ 2007ರಲ್ಲಿ ಗುವಾಹಟಿಯಲ್ಲಿ ಪಾಕಿಸ್ಥಾನದ ವಿರುದ್ಧದ ಪಂದ್ಯದ ವೇಳೆ ಧೋನಿ ಜತೆ ಫೋಟೋ ತೆಗೆಸಿಕೊಂಡಿದ್ದರು. ಆಗ ರಿಯಾನ್‌ಗೆ ಕೇವಲ 3 ವರ್ಷದ ಬಾಲಕನಾಗಿದ್ದ. ಧೋನಿ ಜತೆಗೆ ರಿಯಾನ್‌ ತೆಗೆಸಿಕೊಂಡಿದ್ದ ಅಂದಿನ ಫೋಟೋ ವೈರಲ್‌ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

  • ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ....

  • ಹೊಸದಿಲ್ಲಿ: ಆತಿಥೇಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಎರಡನೇ ಮುಖಾಮುಖೀ ಕೋಟ್ಲಾದಲ್ಲಿ ನಡೆಯಲಿದೆ. ಶನಿವಾರದ ಎರಡನೇ ಪಂದ್ಯದಲ್ಲಿ...

  • ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ ತಂಡದ ಅಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ತನ್ನ ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯ ಕ್ರಿಕೆಟ್‌ನಿಂದ ದೂರವಿದ್ದ ಸಮಯ ಉತ್ತಮ ಕ್ರಿಕೆಟಗನಾಗಿಸಲು...

  • ಕೋಲ್ಕತಾ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗದೆ ಕೂಟದಿಂದ ಬಹುತೇಕ ಹೊರಬಿದ್ದ ಮೇಲೆ ಅಬ್ಬರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು...

  • ಕೋಲ್ಕತಾ: ಪ್ಲೇ ಆಫ್ ನಿಂದ ಬಹುತೇಕ ದೂರವಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ. "ಈಡನ್‌...

ಹೊಸ ಸೇರ್ಪಡೆ