ಐಪಿಎಲ್‌ನಿಂದ ಸ್ಟೇನ್‌ ಔಟ್‌!

Team Udayavani, Apr 26, 2019, 6:05 AM IST

ಬೆಂಗಳೂರು: ಇತ್ತೀಚೆಗಷ್ಟೇ ಆರ್‌ಸಿಬಿ ತಂಡವನ್ನು ಸೇರಿಕೊಂಡ ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಅಷ್ಟೇ ಬೇಗ ಐಪಿಎಲ್‌ನಿಂದ ಹೊರಬೀಳುವ ಸಂಕಟಕ್ಕೆ ಸಿಲುಕಿದ್ದಾರೆ. ಭುಜದ ನೋವಿನಿಂದಾಗಿ ಅವರು ಐಪಿಎಲ್‌ ಬಿಟ್ಟು ತವರಿಗೆ ವಾಪಸಾಗಲಿದ್ದಾರೆ. ಸ್ಟೇನ್‌ ನಿರ್ಗಮನವನ್ನು ಆರ್‌ಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಎ. 21ರ ಚೆನ್ನೈ ಎದುರಿನ ಪಂದ್ಯಕ್ಕಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡ ಬಳಿಕ ಸ್ಟೇನ್‌ ಈ ಸಮಸ್ಯೆಗೆ ಸಿಲುಕಿದ್ದರು. ಮುನ್ನೆಚ್ಚರಿಕೆಯ ಕ್ರಮವಾಗಿ ಬುಧವಾರದ ಪಂಜಾಬ್‌ ಎದುರಿನ ಪಂದ್ಯದಿಂದ ಅವರನ್ನು ಹೊರಗಿರಿಸಲಾಗಿತ್ತು.

ಭುಜದ ನೋವಿನಿಂದಾಗಿ ಡೇಲ್‌ ಸ್ಟೇನ್‌ ಅವರಿಗೆ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇವರ ಉಪಸ್ಥಿತಿ ತಂಡದ ಮನೋಬಲವನ್ನು ಹೆಚ್ಚುವಂತೆ ಮಾಡಿತ್ತು. ತಂಡಕ್ಕೆ ಅವರು ತುಂಬಿದ ಸ್ಫೂರ್ತಿಗಾಗಿ ಕೃತಜ್ಞತೆಗಳು…
ಎಂಬುದಾಗಿ ಆರ್‌ಸಿಬಿ ಚೇರ್ಮನ್‌ ಸಂಜೀವ್‌ ಚುರಿವಾಲಾ ಹೇಳಿದ್ದಾರೆ.ಪ್ರಸಕ್ತ ಋತುವಿನಲ್ಲಿ ಸ್ಟೇನ್‌ ಆಡಿದ್ದು 2 ಪಂದ್ಯ ಮಾತ್ರ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ