ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು

Team Udayavani, May 5, 2019, 6:25 AM IST

ಬೆಂಗಳೂರು: ಶಿಮ್ರಾನ್‌ ಹೆಟ್ಮೈರ್‌ ಮತ್ತು ಗುರುಕೀರತ್‌ ಸಿಂಗ್‌ ಮಾನ್‌ ಅವರ ಆಕರ್ಷಕ ಆಟದಿಂದಾಗಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ.

ಹೈದರಾಬಾದ್‌ ತಂಡದ 7 ವಿಕೆಟಿಗೆ 175 ರನ್ನಿಗೆ ಉತ್ತರವಾಗಿ ಬೆಂಗಳೂರು ತಂಡವು 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು. ಈ ಮೂಲಕ ಗೆಲುವಿನೊಂದಿಗೆ ಈ ವರ್ಷದ ಐಪಿಎಲ್ ಕೂಟವನ್ನು ಮುಗಿಸಿತು. ಹೈಟ್ಮೈರ್‌ ಮತ್ತು ಗುರುಕೀರತ್‌ 4ನೇ ವಿಕೆಟಿಗೆ 144 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವನ್ನು ಖಚಿತಪಡಿಸಿದ್ದರು. ಇಬ್ಬರೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ 19 ಓವರ್‌ಗಳ ವರೆಗೂ ಪಂದ್ಯದ ಮೇಲೆ ನಿಯಂತ್ರಣ ಹೊಂದಿತ್ತು. ಉಮೇಶ್‌ ಯಾದವ್‌ ಎಸೆದ ಕೊನೆಯ ಓವರ್‌ನಲ್ಲಿ 28 ರನ್‌ಗಳು ಸೋರಿ ಹೋಗಿದ್ದು ದುಬಾರಿಯಾಗಿ ಪರಿಣಿಸುವ ಸಾಧ್ಯತೆ ಇದೆ.ಮಾರ್ಟಿನ್‌ ಗಪ್ಟಿಲ್ (30 ರನ್‌, 23 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹಾಗೂ ವೃದ್ಧಿಮಾನ್‌ ಸಾಹಾ (20 ರನ್‌, 11 ಎಸೆತ, 4 ಬೌಂಡರಿ) ಹೈದರಾಬಾದ್‌ಗೆ ಉತ್ತಮ ಆರಂಭ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ