ತವರಿನಲ್ಲಿ ಕಿಂಗ್ಸ್‌ ಜಯದ ನಿರೀಕ್ಷೆ?

ಇಂದು ಪಂಜಾಬ್‌-ಚೆನ್ನೈ ಮುಖಾಮುಖೀ

Team Udayavani, May 5, 2019, 6:10 AM IST

ಮೊಹಾಲಿ: ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್‌ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಎರಡು ತಂಡಗಳಿಗೂ ಇದು ಲೀಗ್‌ ಹಂತದ ಕೊನೆಯ ಪಂದ್ಯ. ಐಪಿಎಲ್‌ನ ಆಟಕ್ಕೆ ಮುಕ್ತಾಯ ಹೇಳಲಿರುವ ಪಂಜಾಬ್‌ ಈ ಪಂದ್ಯದಲ್ಲಿ ಗೆದ್ದು ತವರಿನ ಅಭಿಮಾನಿಗಳಿಗೆ ಕೊಂಚ ಖುಷಿ ನೀಡುವ ನಿರೀಕ್ಷೆಯಲ್ಲಿದೆ.

ಇತ್ತ ಚೆನ್ನೈ ಲೀಗ್‌ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ.

ಪಂಜಾಬ್‌ನಲ್ಲಿ ಸ್ಥಿರ ಪ್ರದರ್ಶನವಿಲ್ಲ
ಪಂಜಾಬ್‌ ತಂಡದಲ್ಲಿ ಸ್ಟಾರ್‌ ಆಟಗಾರರಿ ದ್ದರೂ ಯಾರೂ ಕೂಡ ಸ್ಥಿರ ಪ್ರದರ್ಶನ ನೀಡು ತ್ತಿಲ್ಲ. ಗೇಲ್‌ ಆರಂಭದ ಕೆಲವು ಪಂದ್ಯ ವನ್ನಾಡಿದ ಅನಂತರ ಫಾರ್ಮ್ ಕಳೆದುಕೊಂಡಿದ್ದಾರೆ. ಕೆ.ಎಲ್‌. ರಾಹುಲ್‌ ಹೊರತುಪಡಿಸಿ ಉಳಿದ ಆಟಗಾರರು ವಿಫ‌ಲರಾಗಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಎಡವುತ್ತಿದ್ದ ಪಂಜಾಬ್‌ಗ ನಿಕೋಲಸ್‌ ಪೂರನ್‌ ಮತ್ತು ಸ್ಯಾಮ್‌ ಕರನ್‌, ಮಾಯಾಂಕ್‌ ಅಗರ್ವಾಲ್‌ ಕೊಂಚ ಬಲ ತುಂಬಿದ್ದಾರೆ.

ದುರ್ಬಲ ಬೌಲಿಂಗ್‌
ಬೌಲಿಂಗ್‌ ವಿಭಾಗ ಇನ್ನೂ ಸುಧಾರಿಸದೇ ಇರುವುದರಿಂದ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಶಮಿ ಹೊರತುಪಡಿಸಿ ಯಾರಿಂದಲೂ ಉತ್ತಮ ನಿರ್ವಹಣೆ ಮೂಡಿ ಬರುತ್ತಿಲ್ಲ. ಕಳೆದ 4 ಪಂದ್ಯಗಳಲ್ಲೂ ಸೋತಿರುವ ಪಂಜಾಬ್‌ ಕೊನೆಯ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿ ಗೆಲುವಿನೊಂದಿಗೆ ಕೂಟಕ್ಕೆ ಗುಡ್‌ಬೈ ಹೇಳುವ ನಿರೀಕ್ಷೆಯಲ್ಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ