ರಕ್ತ ಸುರಿಯುತ್ತಿದ್ದರೂ ಆಡಿದ ವಾಟ್ಸನ್‌!

Team Udayavani, May 15, 2019, 6:28 AM IST

ಹೈದರಾಬಾದ್‌: ಐಪಿಎಲ್ ಕೂಟದ ಫೈನಲ್ನಲ್ಲಿ ಇನ್ನೊಂದು ಅಚ್ಚರಿ ನಡೆದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆರಂಭಕಾರ ಶೇನ್‌ ವಾಟ್ಸನ್‌ ಡೈವ್‌ ಮಾಡುವ ವೇಳೆ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯವನ್ನು ಲೆಕ್ಕಿಸಿದ ವಾಟ್ಸನ್‌ ಅಮೋಘ 80 ರನ್‌ ಸಿಡಿಸಿ ಮೆರೆದಿದ್ದರು. ಈ ವಿಷಯನ್ನು ಚೆನ್ನೈ ಆಟಗಾರ ಹರ್ಭಜನ್‌ ಬಹಿರಂಗಗೊಳಿಸಿದ್ದು, ವಾಟ್ಸನ್‌ ಅವರ ಆಟವನ್ನು ಎಲ್ಲರು ಶ್ಲಾಘಿಸಿರುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈ ವಿರುದ್ಧದ ಫೈನಲ್ನಲ್ಲಿ ರನ್‌ ಕಸಿದುಕೊಳ್ಳುವ ವೇಳೆ ಬಿದ್ದ ವಾಟ್ಸನ್‌ ಮೊಣಕಾಲಿಗೆ ಗಾಯವಾಗಿವೆ. ಆದರೆ ಈ ವಿಷಯ ಕೊನೆಗಳಿಗೆಯವರೆಗೂ ಯಾರಿಗೂ ತಿಳಿದಿರಲಿಲ್ಲ. ಹರ್ಭಜನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಾಟ್ಸನ್‌ ಅವರ ರಕ್ತಸಿಕ್ತ ಮೊಣಕಾಲಿನ ಫೋಟೋವನ್ನು ಹಾಕಿ ಈ ವಿಷಯವನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ವಾಟ್ಸನ್‌ ಕಾಲಿನ ರಕ್ತದ ಕಲೆಗಳನ್ನು ನೀವು ಗಮನಿಸಿದ್ದೀರಾ? ಪಂದ್ಯದ ಅನಂತರ ಅವರ ಕಾಲಿಗೆ 6 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದಾರೆ. ಡೈವ್‌ ವೇಳೆ ಗಾಯಾ ಮಾಡಿಕೊಂಡ ಅವರು ಯಾರ ಬಳಿಯೂ ಈ ವಿಷಯವನ್ನು ಹೇಳದೆ ಆಟವನ್ನು ಮುಂದುವರಿಸಿದ್ದಾರೆ’ ಎಂದು ಹರ್ಭಜನ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಕೂಟದ ಆರಂಭವಾದಂದಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ವಿಭಾಗದಲ್ಲಿ ಸ್ಥಿರತೆ ಇರಲಿಲ್ಲ. ತಂಡದ ಓಪನರ್‌ ಶೇನ್‌ ವಾಟ್ಸನ್‌ ಮೊದಲೆರಡು ಪಂದ್ಯಗಳಲ್ಲಿ ಮಿಂಚಿ ಮತ್ತೆ ಮಂಕಾಗಿದ್ದರು. ಅನಂತರ ಕೊನೆಯ ಎರಡು ಪಂದ್ಯಗಳಲ್ಲಿ ಸಿಡಿದು ಹೀರೋ ಎಂದೆನಿಸಿಕೊಂಡಿದ್ದರು. ಮುಂಬೈ ವಿರುದ್ಧದ ಫೈನಲ್ನಲ್ಲಿ ಅತ್ಯುತ್ತಮ ಆಟವಾಡಿದ್ದರು. ಆದರೆ ನಿರ್ಣಾಯಕ ಘಟ್ಟದಲ್ಲಿ ರನೌಟ್ ಆಗಿ ಚೆನ್ನೈ ಸೋಲುವಂತಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ