Udayavni Special

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

Team Udayavani, Oct 26, 2020, 9:19 PM IST

IPL

ಶಾರ್ಜಾ: ಪಂಜಾಬ್‌ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡುತ್ತಿರುವ ಕೋಲ್ಕತಾ ನೈಟ್‌ರೈಡರ್, ಆರಂಭಕಾರ ಶುಭಮನ್‌ ಗಿಲ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಸಾಹಸದಿಂದ ಹೀನಾಯ ಕುಸಿತದಿಂದ ಪಾರಾಗಿ 9 ವಿಕೆಟಿಗೆ 149 ರನ್‌ ಪೇರಿಸಿದೆ.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ 19ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಗಿಲ್‌ ಬಹುಮೂಲ್ಯ 57 ರನ್‌ ಬಾರಿಸಿದರು. 45 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್‌, 3 ಬೌಂಡರಿ ಸೇರಿತ್ತು. ಅವರಿಗೆ ನಾಯಕ ಇಯಾನ್‌ ಮಾರ್ಗನ್‌ ಉತ್ತಮ ಬೆಂಬಲ ನೀಡಿದರು.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಳ್ಳುವ ಪಂಜಾಬ್‌ ಕಪ್ತಾನ ಕೆ.ಎಲ್‌. ರಾಹುಲ್‌ ಅವರ ನಿರ್ಧಾರ ಮೊದಲ ಓವರಿನಿಂದಲೇ ಯಶಸ್ಸು ಪಡೆಯುತ್ತ ಹೋಯಿತು. ಗ್ಲೆನ್‌ ಮ್ಯಾಕ್ಸ್‌ವೆಲ್‌ 2ನೇ ಎಸೆತದಲ್ಲೇ ನಿತೀಶ್‌ ರಾಣಾ ವಿಕೆಟ್‌ ಹಾರಿಸಿದರು. ರಾಣಾ ಖಾತೆಯನ್ನೇ ತೆರೆದಿರಲಿಲ್ಲ.

ಮೊಹಮ್ಮದ್‌ ಶಮಿ ಪಂದ್ಯದ ದ್ವಿತೀಯ ಓವರಿನಲ್ಲಿ ಅವಳಿ ಆಘಾತವಿಕ್ಕಿದರು. 3 ಎಸೆತಗಳ ಅಂತರದಲ್ಲಿ ರಾಹುಲ್‌ ತ್ರಿಪಾಠಿ (7) ಮತ್ತು ದಿನೇಶ್‌ ಕಾರ್ತಿಕ್‌ (0) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಕೆಕೆಆರ್‌ 10 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು.

ಈ ಹಂತದಲ್ಲಿ ಆರಂಭಕಾರ ಶುಭಮನ್‌ ಗಿಲ್‌ ಮತ್ತು ನಾಯಕ ಇಯಾನ್‌ ಮಾರ್ಗನ್‌ 81 ರನ್ನುಗಳ ಬಿರುಸಿನ ಜತೆಯಾಟವೊಂದನ್ನು ನಡೆಸಿದರು. ತಂಡ ಚೇತರಿಸಿಕೊಳ್ಳುವ ಸೂಚನೆ ಲಭಿಸಿತು. ಆದರೆ 10ನೇ ಓವರಿನಲ್ಲಿ ರವಿ ಬಿಶ್ನೋಯಿ ಕೆಕೆಆರ್‌ ಕಪ್ತಾನನ ವಿಕೆಟ್‌ ಕಿತ್ತು ಮತ್ತೂಂದು ಸುತ್ತಿನ ಕುಸಿತಕ್ಕೆ ಮುಹೂರ್ತವಿರಿಸಿದರು. ಮಾರ್ಗನ್‌ ಗಳಿಕೆ 25 ಎಸೆತಗಳಿಂದ 40 ರನ್‌ (5 ಬೌಂಡರಿ, 2 ಸಿಕ್ಸರ್‌). 3ಕ್ಕೆ 91ರಲ್ಲಿದ್ದ ಕೋಲ್ಕತಾ 114ಕ್ಕೆ ತಲಪುವಷ್ಟರಲ್ಲಿ 7 ವಿಕೆಟ್‌ ಉದುರಿಸಿಕೊಂಡಿತು. ಬಳಿಕ ಲಾಕಿ ಫ‌ರ್ಗ್ಯುಸನ್‌ ಮಿಂಚಿನ ಗತಿಯಲ್ಲಿ 24 ರನ್‌ ಹೊಡೆದು 150ರ ಟಾರ್ಗೆಟ್‌ ನಿಗದಿಪಡಿಸುವಲ್ಲಿ ಯಶಸ್ವಿಯಾದರು.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಸಿ ಪೂರಣ್‌ ಬಿ ಶಮಿ 57
ನಿತೀಶ್‌ ರಾಣಾ ಸಿ ಗೇಲ್‌ ಬಿ ಮ್ಯಾಕ್ಸ್‌ವೆಲ್‌ 0
ರಾಹುಲ್‌ ತ್ರಿಪಾಠಿ ಸಿ ರಾಹುಲ್‌ ಬಿ ಶಮಿ 7
ದಿನೇಶ್‌ ಕಾರ್ತಿಕ್‌ ಸಿ ರಾಹುಲ್‌ ಬಿ ಶಮಿ 0
ಇಯಾನ್‌ ಮಾರ್ಗನ್‌ ಸಿ ಅಶ್ವಿ‌ನ್‌ ಬಿ ಬಿಶ್ನೋಯಿ 40
ಸುನೀಲ್‌ ನಾರಾಯಣ್‌ ಬಿ ಜೋರ್ಡನ್‌ 6
ಕಮಲೇಶ್‌ ನಾಗರಕೋಟಿ ಬಿ ಅಶ್ವಿ‌ನ್‌ 6
ಪ್ಯಾಟ್‌ ಕಮಿನ್ಸ್‌ ಎಲ್‌ಬಿಡಬ್ಲ್ಯುಬಿಶ್ನೋಯಿ 1
ಲಾಕಿ ಫ‌ರ್ಗ್ಯುಸನ್‌ ಔಟಾಗದೆ 24
ವರುಣ್‌ ಚಕ್ರವರ್ತಿ ಬಿ ಜೋರ್ಡನ್‌ 2
ಪ್ರಸಿದ್ಧ್ ಕೃಷ್ಣ ಔಟಾಗದೆ 0

ಇತರ 6
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 149
ವಿಕೆಟ್‌ ಪತನ: 1-1, 2-10, 3-10, 4-91, 5-101, 6-113, 7-114, 8-136, 9-149.

ಬೌಲಿಂಗ್‌:
ಗ್ಲೆನ್‌ ಮ್ಯಾಕ್ಸ್‌ವೆಲ್‌ 2-0-21-1
ಮೊಹಮ್ಮದ್‌ ಶಮಿ 4-0-35-3
ಆರ್ಶ್‌ದೀಪ್‌ ಸಿಂಗ್‌ 2-0-18-0
ಮುರುಗನ್‌ ಅಶ್ವಿ‌ನ್‌ 4-0-27-1
ಕ್ರಿಸ್‌ ಜೋರ್ಡನ್‌ 4-0-25-2
ರವಿ ಬಿಶ್ನೋಯಿ 4-1-20-2

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

redmi note 9

Redmi Note-9 ಸರಣಿಯ 3 ಹೊಸ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

basavanabagewadi

ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WEBSITE-SIZE

ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !

ದುರಂತ ಅಂತ್ಯ ಕಂಡ ಫಿಲಿಪ್‌ ಹ್ಯೂಸ್‌ಗೆ ಉಭಯ ತಂಡಗಳಿಂದ ಗೌರವ

ದುರಂತ ಅಂತ್ಯ ಕಂಡ ಫಿಲಿಪ್‌ ಹ್ಯೂಸ್‌ಗೆ ಉಭಯ ತಂಡಗಳಿಂದ ಗೌರವ

ಅದಾನಿ ವಿರುದ್ಧ ಸಿಡ್ನಿಯಲ್ಲಿ ಪ್ರತಿಭಟನೆ: ಪೋಸ್ಟರ್ ಹಿಡಿದು ಮೈದಾನಕ್ಕೆ ನುಗ್ಗಿದ ಇಬ್ಬರು

ಅದಾನಿ ವಿರುದ್ಧ ಸಿಡ್ನಿಯಲ್ಲಿ ಪ್ರತಿಭಟನೆ: ಪೋಸ್ಟರ್ ಹಿಡಿದು ಮೈದಾನಕ್ಕೆ ನುಗ್ಗಿದ ಇಬ್ಬರು

000

ಅಬ್ಬರಿಸಿದ ಆಸೀಸ್ ಆಟಗಾರರು ; ಭಾರತಕ್ಕೆ 375 ರ ಬೃಹತ್ ಸವಾಲು

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

redmi note 9

Redmi Note-9 ಸರಣಿಯ 3 ಹೊಸ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

basavanabagewadi

ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.