ಡೆಲ್ಲಿ ತಂಡಕ್ಕೆ ವೋಕ್ಸ್ ಬದಲು ಡ್ವಾರ್ಶಿಯಸ್
Team Udayavani, Sep 14, 2021, 6:53 AM IST
ನವದೆಹಲಿ: ಐಪಿಎಲ್ನಿಂದ ಹಿಂದೆ ಸರಿದ ಇಂಗ್ಲೆಂಡಿನ ಆಲ್ರೌಂಡರ್ ಕ್ರಿಸ್ ವೋಕ್ಸ್ ಬದಲು ಆಸ್ಟ್ರೇಲಿಯದ ಬೆನ್ ಡ್ವಾರ್ಶಿಯಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಡ್ವಾರ್ಶಿಯಸ್ ಶೀಘ್ರವೇ ಯುಎಇಯ ಡೆಲ್ಲಿ ಕ್ಯಾಪಿಟಲ್ಸ್ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ಈ ವರ್ಷದ ಐಪಿಎಲ್ ಮೊದಲರ್ಧದಲ್ಲಿ 3 ಪಂದ್ಯಗಳನ್ನಾಡಿದ್ದ ಕ್ರಿಸ್ ವೋಕ್ಸ್ 5 ವಿಕೆಟ್ ಉರುಳಿಸಿದ್ದರು.
ಇನ್ನೊಂದೆಡೆ 27 ವರ್ಷದ ಡ್ವಾರ್ಶಿಯಸ್ ಬಿಗ್ ಬಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ ತಂಡದ ಪರ ಆಡಿದ್ದು, 69 ಪಂದ್ಯಗಳಿಂದ 85 ವಿಕೆಟ್ ಕೆಡವಿದ್ದಾರೆ. ಆದರೆ ಈವರೆಗೆ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ.