IPL 2024; ಮೈದಾನದ ಸಿಬಂದಿಗೆ ಬಹುಮಾನ


Team Udayavani, May 28, 2024, 6:30 AM IST

1-qewqwewq

ಚೆನ್ನೈ: ಈ ಬಾರಿಯ ಐಪಿಎಲ್‌ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಲು ಪ್ರಮುಖ ಪಾತ್ರ ವಹಿಸಿದ 10 ಪ್ರಮುಖ ಮೈದಾನಗಳ ಸಿಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದೆ. ಗ್ರೌಂಡ್ಸ್‌ಮನ್‌ ಮತ್ತು ಕ್ಯುರೇಟರ್‌ಗಳಿಗೆ ಈ ಬಹುಮಾನ ಸಂದಾಯವಾಗಲಿದೆ. ಹಾಗೆಯೇ ಉಳಿದ 3 ಮೈದಾನದ ಸಿಬಂದಿಗೆ ತಲಾ 10 ಲಕ್ಷ ರೂ. ನೀಡಲಿದೆ.

10 ಮಾಮೂಲು ಮೈದಾನಗಳೆಂದರೆ ಮುಂಬಯಿ, ಹೊಸದಿಲ್ಲಿ, ಚೆನ್ನೈ, ಕೋಲ್ಕತಾ, ಚಂಡೀಗಢ, ಹೈದರಾಬಾದ್‌, ಬೆಂಗಳೂರು, ಲಕ್ನೋ, ಅಹ್ಮದಾಬಾದ್‌ ಮತ್ತು ಜೈಪುರ. ಹೆಚ್ಚುವರಿ ಮೈದಾನಗಳೆಂದರೆ ಗುವಾಹಟಿ, ವಿಶಾಖಪಟ್ಟಣ ಮತ್ತು ಧರ್ಮಶಾಲಾ.

“ಈ ಬಾರಿಯ ಐಪಿಎಲ್‌ ಯಶಸ್ವಿಗೊಳ್ಳಲು ಮೈದಾನದ ತೆರೆಮರೆಯ ಸಿಬಂದಿಯ ಪಾಲು ದೊಡ್ಡದು. ಕಠಿನ ಹಾಗೂ ವ್ಯತಿರಿಕ್ತ ಸನ್ನಿವೇಶದಲ್ಲೂ ಉತ್ತಮ ದರ್ಜೆಯ ಪಿಚ್‌ ನಿರ್ಮಾಣಕ್ಕೆ ದಣಿವರಿಯದೆ ಶ್ರಮಿಸಿದವರಿಗೆ ಧನ್ಯವಾದಗಳು’ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಕೆಕೆಆರ್‌-ಹೈದರಾಬಾದ್‌: ಎಕ್ಸ್‌ಟ್ರಾ ಇನ್ನಿಂಗ್ಸ್‌

ಕೆಕೆಆರ್‌ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಕಪ್‌ ಎತ್ತಿದ 4ನೇ ತಂಡವೆನಿಸಿತು. ಉಳಿದ 3 ತಂಡಗಳೆಂದರೆ ರಾಜಸ್ಥಾನ್‌ (2008), ಮುಂಬೈ (2017, 2019, 2020) ಮತ್ತು ಗುಜರಾತ್‌ (2022).

ಟ್ರ್ಯಾವಿಸ್‌ ಹೆಡ್‌ ಐಪಿಎಲ್‌ ಸೀಸನ್‌ ಒಂದರ ಪ್ಲೇ ಆಫ್ನಲ್ಲಿ 2 ಸೊನ್ನೆ ಸುತ್ತಿದ 4ನೇ ಆಟಗಾರ. ಲಸಿತ ಮಾಲಿಂಗ (2013), ಶ್ರೀವತ್ಸ ಗೋಸ್ವಾಮಿ (2020) ಮತ್ತು ಶಕಿಬ್‌ ಅಲ್‌ ಹಸನ್‌ (2021) ಉಳಿದ ಮೂವರು.

ಹೆಡ್‌ 567 ರನ್‌ ಹೊಡೆದರು. ಸ್ಟ್ರೈಕ್‌ರೇಟ್‌ 191.55. ಇದು ಐಪಿಎಲ್‌ ಸೀಸನ್‌ ಒಂದರಲ್ಲಿ 500 ಪ್ಲಸ್‌ ರನ್‌ ಬಾರಿಸಿದ ಆಟಗಾರನ 2ನೇ ಅತ್ಯಧಿಕ ಸ್ಟ್ರೈಕ್‌ರೇಟ್‌ ಆಗಿದೆ. ದಾಖಲೆ ಆ್ಯಂಡ್ರೆ ರಸೆಲ್‌ ಹೆಸರಲ್ಲಿದೆ. 2019ರಲ್ಲಿ ಅವರು 204.81ರ ಸ್ಟ್ರೈಕ್‌ರೇಟ್‌ನಲ್ಲಿ 510 ರನ್‌ ಹೊಡೆದಿದ್ದರು.

ಸುನೀಲ್‌ ನಾರಾಯಣ್‌ ಐಪಿಎಲ್‌ ಋತುವೊಂದರಲ್ಲಿ 400 ಪ್ಲಸ್‌ ರನ್‌ (488) ಹಾಗೂ 17 ವಿಕೆಟ್‌ ಸಂಪಾದಿಸಿದ 2ನೇ ಆಲ್‌ರೌಂಡರ್‌ ಆಗಿ ಮೂಡಿಬಂದರು. 2008ರಲ್ಲಿ ಶೇನ್‌ ವಾಟ್ಸನ್‌ 472 ರನ್‌ ಹಾಗೂ 17 ವಿಕೆಟ್‌ಗಳ ಸಾಧನೆಗೈದಿದ್ದರು.

ಸುನೀಲ್‌ ನಾರಾಯಣ್‌ ಐಪಿಎಲ್‌ ಸೀಸನ್‌ನಲ್ಲಿ 2 ಸಲ 300 ರನ್‌ ಹಾಗೂ 15 ವಿಕೆಟ್‌ ಸಾಧನೆಗೈದ 2ನೇ ಕ್ರಿಕೆಟಿಗನೆನಿಸಿದರು. ಅವರು 2018ರಲ್ಲೂ ಅತ್ಯುತ್ತಮ ಆಲ್‌ರೌಂಡ್‌ ಪ್ರದರ್ಶನ ನೀಡಿದ್ದರು (375 ರನ್‌, 17 ವಿಕೆಟ್‌). ಜಾಕ್‌ ಕ್ಯಾಲಿಸ್‌ ಮೊದಲಿಗ (2012 ಮತ್ತು 2013).

ವೆಂಕಟೇಶ್‌ ಅಯ್ಯರ್‌ ಐಪಿಎಲ್‌ ಪ್ಲೇಆಫ್ನಲ್ಲಿ 4 ಸಲ 50 ಪ್ಲಸ್‌ ರನ್‌ ಬಾರಿಸಿ ಡ್ವೇನ್‌ ಸ್ಮಿತ್‌, ಮೈಕಲ್‌ ಹಸ್ಸಿ ಮತ್ತು ಶೇನ್‌ ವಾಟ್ಸನ್‌ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾದರು. ದಾಖಲೆ ಸುರೇಶ್‌ ರೈನಾ ಹೆಸರಲ್ಲಿದೆ (7).

ಪ್ಯಾಟ್‌ ಕಮಿನ್ಸ್‌ ಐಪಿಎಲ್‌ ಸೀಸನ್‌ನಲ್ಲಿ 2ನೇ ಅತ್ಯಧಿಕ ವಿಕೆಟ್‌ ಉರುಳಿಸಿದ ನಾಯಕರೆನಿಸಿದರು (18). 2008ರಲ್ಲಿ ಶೇನ್‌ ವಾರ್ನ್ 19 ವಿಕೆಟ್‌ ಕೆಡವಿದ್ದು ದಾಖಲೆ.

ಸುನೀಲ್‌ ನಾರಾಯಣ್‌ ಅತ್ಯಧಿಕ 3 ಸಲ ಮೋಸ್ಟ್‌ ವ್ಯಾಲ್ಯುಯೇಬಲ್‌ ಪ್ಲೇಯರ್‌ ಪ್ರಶಸ್ತಿಗೆ ಭಾಜನರಾದರು. 2012ರ ಪದಾರ್ಪಣ ಪಂದ್ಯಾವಳಿ ಹಾಗೂ 2018ರಲ್ಲೂ ಅವರಿಗೆ ಈ ಪ್ರಶಸ್ತಿ ಒಲಿದಿತ್ತು.

ಟಾಪ್ ನ್ಯೂಸ್

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

6

Davangere: ಸರಣಿ ಅಪಘಾತ; ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರಿಗೆ ಗಂಭೀರ ಗಾಯ

5-

Special Story: ಅಗ್ನಿ ಅನಾಹುತ ಪ್ರಕರಣಗಳು ಇಳಿಕೆ

4-ballary

Congress ಆಕಾಂಕ್ಷಿ ಓಟ, ಬಿಜೆಪಿಯತ್ತ ನೋಟ? ಬಿಜೆಪಿ ಪ್ರಭಾವಿ ಮುಖಂಡರ ಭೇಟಿಯಾದ ಆಕಾಂಕ್ಷಿ

3-yellapur

Yellapur: ಜಲಪಾತ ವೀಕ್ಷಿಸಲೆಂದು ಬಂದ ವ್ಯಕ್ತಿ ಈಜಲು ಹೋಗಿ ಮುಳುಗಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

t20 world cup; usa facing south africa in super 8 clash

T20 World Cup; ದ. ಆಫ್ರಿಕಾ-ಅಮೆರಿಕ ಎಂಟರ ಆಟ; ಇಂದಿನಿಂದ ಸೂಪರ್‌-8

INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌

INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌

Match fixing during T20 World Cup?

T20 World Cup ವೇಳೆ ಮ್ಯಾಚ್‌ ಫಿಕ್ಸಿಂಗ್‌?

T20 World Cup; Haris Rauf was about to hit the fan

T20 World Cup; ಅಭಿಮಾನಿಗೆ ಹೊಡೆಯಲು ಮುಂದಾದ ಹ್ಯಾರಿಸ್‌ ರೌಫ್

Gautam Gambhir made a new demand to become the coach of Team India

Head Coach; ಟೀಂ ಇಂಡಿಯಾ ಕೋಚ್ ಆಗಲು ಹೊಸ ಬೇಡಿಕೆ ಇಟ್ಟ ಗೌತಮ್ ಗಂಭೀರ್

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

8-kushtagi

Kushtagi: ಅರೆಸ್ಟ್ ಮಾಡುವುದಾದರೆ 3 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಅರೆಸ್ಟ್ ಮಾಡಿ

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

6

Davangere: ಸರಣಿ ಅಪಘಾತ; ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.