ಐಪಿಎಲ್ ಹರಾಜು ಡಿ.17,18ಕ್ಕೆ?
Team Udayavani, Nov 8, 2018, 6:45 AM IST
ಮುಂಬೈ: ಮುಂದಿನ ಬಾರಿಯ ಐಪಿಎಲ್ ಕೂಟಕ್ಕಾಗಿ ರಾಜಸ್ಥಾನದ ಜೈಪುರದಲ್ಲಿ ಈ ವರ್ಷಾಂತ್ಯದದಲ್ಲಿ ಹರಾಜು ನಡೆಯಲಿದೆ.
ಡಿ.17, 18ರಂದು ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಇನ್ನಷ್ಟೇ ಖಚಿತ ವರದಿ ಬರಬೇಕಾಗಿದೆ. ಅಚ್ಚರಿಯೆಂದರೆ ಹರಾಜಿನ ಪ್ರಮಾಣ ಸಣ್ಣದಾಗಿರವುದರಿಂದ ಜೈಪುರದಲ್ಲಿ ಎರಡು ದಿನ ಹರಾಜು ನಡೆಸುವ ಉದ್ದೇಶವಾದರೂ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಮಾಮೂಲಿಯಾಗಿ ಬೃಹತ್ ಪ್ರಮಾಣದ ಹರಾಜು ನಡೆಸುವಾಗ ಎರಡು ದಿನ ನಡೆಸಲಾಗುತ್ತದೆ. ಅದು ಈ ವರ್ಷಾರಂಭದಲ್ಲಿ ನಡೆದಿದೆ.
ಇದೀಗ ಫ್ರಾಂಚೈಸಿಗಳಿಗೆ ಬೇಕಾಗಿರುವುದು ಕೆಲವೇ ಕೆಲವು ಆಟಗಾರರು ಮಾತ್ರ. ಹಾಗಿರುವಾಗ ಎರಡು ದಿನ ಏಕೆ ಎನ್ನುವುದು ಪ್ರಶ್ನೆ. ಇದರ ಜೊತೆಗೆ ಐಪಿಎಲ್ ಸ್ಥಳ ಯಾವುದು ಎನ್ನುವುದು ಇನ್ನೊಂದು ಪ್ರಶ್ನೆ. ಮುಂದಿನ ಸಾರ್ವತ್ರಿಕ ಚುನಾವಣೆ ಬರುವುದರಿಂದ ಕೂಟವನ್ನು ಭಾರತದಲ್ಲಿ ನಡೆಸುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಬೇರೆ ದೇಶಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ದ.ಆಫ್ರಿಕಾ ಮತ್ತು ಯುಎಇ ಈ ಪೈಕಿ ನೆಚ್ಚಿನ ತಾಣಗಳಾಗಿವೆ. 2009ರಲ್ಲಿ ಸಾರ್ವತ್ರಿಕ ಚುನಾವಣೆ ಬಂದಿದ್ದಾಗ ಐಪಿಎಲ್ ಅನ್ನು ದ.ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲಿ ಅರ್ಧಭಾಗ ಯುಎಇನಲ್ಲಿ ನಡೆಸಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್