ಫೆ. 18ಕ್ಕೆ ಐಪಿಎಲ್ ಹರಾಜು: ಬಿಸಿಸಿಐ
Team Udayavani, Jan 23, 2021, 7:15 AM IST
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಪಂದ್ಯಾವಳಿಗಾಗಿ ಆಟಗಾರರ ಹರಾಜು ಫೆ. 18ರಂದು ನಡೆಯುವ ಸಾಧ್ಯತೆ ಇದೆ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
“ಐಪಿಎಲ್ ಕ್ರಿಕೆಟಿಗರ ಹರಾಜು ಫೆ. 18ರಂದು ನಡೆಸಲು ನಿರ್ಧರಿಸಲಾಗಿದೆ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ. ಹಾಗೆಯೇ ಸ್ಥಳವನ್ನೂ ನಿರ್ಧರಿ ಸಲಾಗಿಲ್ಲ’ ಎಂಬುದಾಗಿ ಬಿಸಿಸಿಐ ಅಧಿಕಾರಿ ಹೇಳಿದರು.
ಹರಾಜಿಗಿಂತ ಮೊದಲು ಈ ಬಾರಿಯ ಐಪಿಎಲ್ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇತ್ಯರ್ಥ ವಾಗಬೇಕಿದೆ. ಇದನ್ನು ಭಾರತದಲ್ಲೇ ನಡೆಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿರುವುದು ಉಲ್ಲೇಖನೀಯ. ಆಗ ವೀಕ್ಷಕರಿಗೆ ಪ್ರವೇಶ ಇರಲಿ ದೆಯೇ ಎಂಬುದು ಮತ್ತೂಂದು ಪ್ರಶ್ನೆ. ಪ್ರವಾಸಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ವೀಕ್ಷಕರಿಗೆ ಪ್ರವೇಶ ನೀಡುವುದಾದರೆ ಆಗ ಐಪಿಎಲ್ ಬಾಗಿಲು ಕೂಡ ಪ್ರೇಕ್ಷಕರಿಗೆ ತೆರೆಯಲಿದೆ ಎಂಬುದೊಂದು ಲೆಕ್ಕಾಚಾರ.
ಐಪಿಎಲ್ ಫ್ರಾಂಚೈಸಿಗಳಿಂದ ಆಟಗಾರರನ್ನು ಕೈಬಿಡುವ ಹಾಗೂ ಉಳಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆಟಗಾರರ “ಟ್ರೇಡಿಂಗ್’ಗೆ ಫೆ. 4 ಅಂತಿಮ ದಿನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ದಿನ, ಆ ವರ್ಷ : ಸ‘ಚಿನ್ನ’ ಡಬಲ್ ಸೆಂಚೂರಿ..!
ಪಿಂಕ್ ಬಾಲ್ ನಲ್ಲಿ ಅಕ್ಷರ್ – ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು
ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಇನ್ನು ನರೇಂದ್ರ ಮೋದಿ ಸ್ಟೇಡಿಯಂ
ಮೊಟೆರಾದಲ್ಲಿ ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದ ರೂಟ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ
ಹಲವು ದಾಖಲೆಗಳ ಸರದಾರ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ
MUST WATCH
ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ
ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ
ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1
ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani
ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?
ಹೊಸ ಸೇರ್ಪಡೆ
ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?
ದಚ್ಚು ಮಾತಿಗೆ ಜಗ್ಗೇಶ್ ಮನಸ್ಸು ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ