ಅಹ್ಮದಾಬಾದ್ನಲ್ಲಿ ಐಪಿಎಲ್ ಫೈನಲ್?
Team Udayavani, Dec 26, 2019, 10:54 PM IST
ಕೋಲ್ಕತಾ: ಮುಂದಿನ ವರ್ಷದ ಐಪಿಎಲ್ ಟಿ20 ಕ್ರಿಕೆಟ್ ಕೂಟದ ಫೈನಲ್ ಪಂದ್ಯಕ್ಕೆ ಅಹ್ಮದಾಬಾದ್ನ ಮೊಟೇರಾ ಕ್ರೀಡಾಂಗಣದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕ್ರೀಡಾಂಗಣ ಮಾರ್ಚ್ನಲ್ಲಿ ಉದ್ಘಾಟನೆಗೊಳ್ಳಲಿದೆ. ಆಗ ಇಲ್ಲಿ ವಿಶ್ವ ಇಲೆವೆನ್ ಹಾಗೂ ಭಾರತದ ನಡುವೆ ಪಂದ್ಯವೊಂದು ನಡೆಯಲಿದೆ. ಈ ಕ್ರೀಡಾಂಗಣದಲ್ಲಿ 1.10 ಲಕ್ಷ ಜನ ಕುಳಿತು ಪಂದ್ಯ ವೀಕ್ಷಿಸಬಹುದಾಗಿದ್ದು, ವಿಶ್ವದ ಕ್ರಿಕೆಟಿನ ಬೃಹತ್ ಕ್ರೀಡಾಂಗಣವಾಗಿದೆ. ಹೀಗಾಗಿ ಐಪಿಎಲ್ ಪ್ರಶಸ್ತಿ ಸಮರವನ್ನು ಇಲ್ಲಿ ಆಯೋಜಿಸಬೇಕೆನ್ನುವುದು ಬಿಸಿಸಿಐ ಆಶಯ.