Udayavni Special

ಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌


Team Udayavani, Oct 23, 2020, 10:44 PM IST

IPLಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

ಶಾರ್ಜಾ: ಮುಂಬೈ ಎದುರಿನ ಶುಕ್ರವಾರದ ಮುಖಾಮುಖಿಯಲ್ಲಿ ಶೋಚನೀಯ ಬ್ಯಾಟಿಂಗ್‌ ಪ್ರದರ್ಶಿಸಿದ ಚೆನ್ನೈ 10ವಿಕೆಟ್‌ಗಳಿಂದ ಎಡವಿ 8ನೇ ಸೋಲನ್ನು ಹೇರಿಕೊಂಡಿದೆ. ಇದರೊಂದಿಗೆ 2020ರ ಐಪಿಎಲ್‌ನಿಂದ ಬಹುತೇಕ ನಿರ್ಗಮಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 9 ವಿಕೆಟಿಗೆ 114 ರನ್‌ ಗಳಿಸಿದರೆ, ರೋಹಿತ್‌ ಶರ್ಮ ಗೈರಲ್ಲಿ ಕಣಕ್ಕಿಳಿದ ಮುಂಬೈ ವಿಕೆಟ್‌ ನಷ್ಟವಿಲ್ಲದೆ 116 ರನ್‌ ಬಾರಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.

ಮುಂಬೈ ಪರ ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌(ಅಜೇಯ 46) ಮತ್ತು ಇಶಾನ್‌ ಕಿಶನ್‌(ಅಜೇಯ 68) ಅತ್ಯಾಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿಸಿದರು.

ಬೌಲ್ಟ್, ಬುಮ್ರಾ ಭೀತಿ
ಮೊದಲೆರಡು ಓವರ್‌ಗಳಲ್ಲೇ ಬೌಲ್ಟ್ ಮತ್ತು ಬುಮ್ರಾ ಸೇರಿಕೊಂಡು “ಚೆನ್ನೈ ಎಕ್ಸ್‌ಪ್ರೆಸ್‌’ನ ಹಳಿ ತಪ್ಪಿಸಿದರು. ಬೌಲ್ಟ್ 5ನೇ ಎಸೆತದಲ್ಲಿ ಋತುರಾಜ್‌ ಗಾಯಕ್ವಾಡ್‌ (0) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಅದು ಬೌಲ್ಟ್ ಅವರ ವಿಕೆಟ್‌-ಮೇಡನ್‌ ಓವರ್‌ ಆಗಿತ್ತು.

ಪಂದ್ಯದ ದ್ವಿತೀಯ ಓವರ್‌ನಲ್ಲಿ ಬುಮ್ರಾ ಸತತ ಎಸೆತಗಳಲ್ಲಿ ಅಂಬಾಟಿ ರಾಯುಡು (2) ಮತ್ತು ಎನ್‌. ಜಗದೀಶನ್‌ (0) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. 3 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ಚೆನ್ನೈ ತೀವ್ರ ಸಂಕಟಕ್ಕೆ ಸಿಲುಕಿತು.

ಬೌಲ್ಟ್ ತಮ್ಮ ದ್ವಿತೀಯ ಓವರ್‌ನಲ್ಲಿ ದೊಡ್ಡ ಬೇಟೆಯಾಡಿದರು. ಡು ಪ್ಲೆಸಿಸ್‌ (1) ಅವರನ್ನು ಕೀಪರ್‌ ಡಿ ಕಾಕ್‌ ಕೈಗೆ ಕ್ಯಾಚ್‌ ಕೊಡಿಸಿದರು. 3 ರನ್ನಿಗೆ 4 ವಿಕೆಟ್‌ ಕಳೆದುಕೊಂಡ ಧೋನಿ ಬಳಗದ ಸ್ಥಿತಿ ಚಿಂತಾಜನಕವಾಗಿತ್ತು. ಐಪಿಎಲ್‌ನಲ್ಲಿ ತಂಡವೊಂದು ಮೊದಲ 4 ವಿಕೆಟ್‌ಗಳನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಕಳೆದುಕೊಂಡ ದ್ವಿತೀಯ ನಿದರ್ಶನ ಇದಾಗಿದೆ. 2011ರ ಡೆಕ್ಕನ್‌ ಎದುರಿನ ಪಂದ್ಯದಲ್ಲಿ ಕೊಚ್ಚಿ 2 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡದ್ದು ದಾಖಲೆ.

ಈ ತೀವ್ರ ಕುಸಿತದಿಂದಾಗಿ ಧೋನಿ 2ನೇ ಓವರಿನಲ್ಲೇ ಕ್ರೀಸ್‌ ಇಳಿಯಬೇಕಾದ ಅನಿವಾರ್ಯತೆಗೆ ಸಿಲುಕಿದರು. ಅವರು ಐಪಿಎಲ್‌ನಲ್ಲಿ ಇಷ್ಟು ಬೇಗ ಬ್ಯಾಟ್‌ ಹಿಡಿದು ಬಂದದ್ದು ಇದೇ ಮೊದಲು!

ಬೌಲ್ಟ್ ತೃತೀಯ ಓವರ್‌ನಲ್ಲೂ ಬೇಟೆ ನಿಲ್ಲಿಸಲಿಲ್ಲ. ಇಲ್ಲಿ ರವೀಂದ್ರ ಜಡೇಜ (7) ಕಿವೀಸ್‌ ವೇಗಿಯ ಬಲೆಗೆ ಬಿದ್ದರು. ಚೆನ್ನೈ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪವರ್‌ ಪ್ಲೇ ಅವಧಿಯಲ್ಲಿ 5 ವಿಕೆಟ್‌ ಉರುಳಿಸಿಕೊಂಡಿತು. ಹಾಗೆಯೇ ಬೌಲ್ಟ್ ಈ ಋತುವಿನ ಪವರ್‌ ಪ್ಲೇಯಲ್ಲಿ ಅತ್ಯಧಿಕ 10 ವಿಕೆಟ್‌ ಹಾರಿಸಿದ ಸಾಧನೆಗೈದರು.

ತಂಡವನ್ನು ಈ ಸಂಕಟದಿಂದ ಮೇಲೆತ್ತಲು ನಾಯಕ ಧೋನಿ ಅವರಿಂದಲೂ ಸಾಧ್ಯವಾಗಲಿಲ್ಲ. ರಾಹುಲ್‌ ಚಹರ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ಬೆನ್ನಲ್ಲೇ ಡಿ ಕಾಕ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಧೋನಿ ಗಳಿಕೆ 16 ರನ್‌.

ಚೆನ್ನೈ 7 ವಿಕೆಟ್‌ 42 ರನ್ನಿಗೆ ಉರುಳಿ ಹೋಯಿತು. ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ರನ್ನಿಗೆ 7 ವಿಕೆಟ್‌ ಬಿದ್ದ 2ನೇ ದೃಷ್ಟಾಂತ ಇದಾಗಿದೆ. 2017ರ ಕೆಕೆಆರ್‌ ಎದುರಿನ ಪಂದ್ಯದಲ್ಲಿ ಆರ್‌ಸಿಬಿ 42 ರನ್ನಿಗೆ 7 ವಿಕೆಟ್‌ ಕಳೆದುಕೊಂಡದ್ದು ದಾಖಲೆ.

ಸ್ಯಾಮ್‌ ಕರನ್‌ ಅವರ ಹೋರಾಟದಿಂದ ಚೆನ್ನೈ ಮೊದಲ ಸಲ ನೂರರೊಳಗೆ ಕುಸಿಯುವ ಅವಮಾನದಿಂದ ಪಾರಾಯಿತು. ಕರನ್‌ ಏಕಾಂಗಿಯಾಗಿ ಹೋರಾಡಿ 47 ಎಸೆತಗಳಿಂದ 52 ರನ್‌ ಬಾರಿಸಿದರು (4 ಬೌಂಡರಿ, 2 ಸಿಕ್ಸರ್‌). ಇನ್ನಿಂಗ್ಸಿನ ಕೊನೆಯ ಎಸೆತದಲ್ಲಿ ಬೌಲ್ಡ್‌ ಆಗಿ ಬೌಲ್ಟ್ಗೆ 4ನೇ ವಿಕೆಟ್‌ ಒಪ್ಪಿಸಿದರು.

ಸ್ಕೋರ್‌ ಪಟ್ಟಿ

ಚೆನ್ನೈ ಸೂಪರ್‌ ಕಿಂಗ್ಸ್‌
ಋತುರಾಜ್‌ ಗಾಯಕ್ವಾಡ್‌ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 0
ಫಾ ಡು ಪ್ಲೆಸಿಸ್‌ ಸಿ ಡಿ ಕಾಕ್‌ ಬಿ ಬೌಲ್ಟ್ 1
ಅಂಬಾಟಿ ರಾಯುಡು ಸಿ ಡಿ ಕಾಕ್‌ ಬಿ ಬುಮ್ರಾ 2
ಜಗದೀಶನ್‌ ಸಿ ಸೂರ್ಯಕುಮಾರ್‌ ಬಿ ಬುಮ್ರಾ 0
ಎಂ.ಎಸ್‌.ಧೋನಿ ಸಿ ಡಿ ಕಾಕ್‌ ಬಿ ಆರ್‌. ಚಹರ್‌ 16
ರವೀಂದ್ರ ಜಡೇಜ ಸಿ ಕೃಣಾಲ್‌ ಬಿ ಬೌಲ್ಟ್ 7
ಸ್ಯಾಮ್‌ ಕರನ್‌ ಬಿ ಬೌಲ್ಟ್ 52
ದೀಪಕ್‌ ಚಹರ್‌ ಸ್ಟಂಪ್ಡ್ ಡಿ ಕಾಕ್‌ ಬಿ ಆರ್‌. ಚಹರ್‌ 0
ಶಾರ್ದುಲ್‌ ಸಿ ಸೂರ್ಯಕುಮಾರ್‌ ಬಿ ಕೋಲ್ಟರ್‌ ನೈಲ್‌ 11
ಇರ್ಮಾನ್‌ ತಾಹಿರ್‌ ಔಟಗದೆ 13

ಇತರ 12
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 114
ವಿಕೆಟ್‌ ಪತನ: 1-0, 2-3-, 3-3, 4-3, 5-21, 6-30, 7-43, 8-71, 9-114.

ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-1-18-4
ಜಸ್‌ಪ್ರೀತ್‌ ಬುಮ್ರಾ 4-0-25-2
ಕೃಣಾಲ್‌ ಪಾಂಡ್ಯ 3-0-16-0
ರಾಹುಲ್‌ ಚಹರ್‌ 4 -0-22-2
ನಥನ್‌ ಕೋಲ್ಟರ್‌ ನೈಲ್‌ 4-0-25-1
ಕೈರನ್‌ ಪೊಲಾರ್ಡ್‌ 1-0-4-0

ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಔಟಾಗದೆ 46
ಇಶಾನ್‌ ಕಿಶನ್‌ ಔಟಾಗದೆ 68

ಇತರ 2
ಒಟ್ಟು(12.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ) 116
ವಿಕೆಟ್‌ ಪತನ:

ಬೌಲಿಂಗ್‌:
ದೀಪಕ್‌ ಚಹರ್‌ 4-0-34-0
ಜೋಶ್‌ ಹ್ಯಾಝೆಲ್‌ವುಡ್‌ 2-0-17-0
ಇಮ್ರಾನ್‌ ತಾಹಿರ್‌ 3-0-22-0
ಶಾರ್ದೂಲ್‌ ಠಾಕೂರ್‌ 2.2-0-26-0
ರವೀಂದ್ರ ಜಡೇಜ 1-0-15-0

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಕಳಪೆ ಫೀಲ್ಡಿಂಗ್‌ ಬಗ್ಗೆ ಕೊಹ್ಲಿ ಬೇಸರ

ಕಳಪೆ ಫೀಲ್ಡಿಂಗ್‌ ಬಗ್ಗೆ ಕೊಹ್ಲಿ ಬೇಸರ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

Sajid

ಸಾಜಿದ್‌ ಸುಳಿವು ನೀಡಿದರೆ 37 ಕೋ. ರೂ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.