ಐಪಿಎಲ್: ಪಂಜಾಬ್ ತಂಡದ ಕೋಚ್ ಹುದ್ದೆ ನಿರಾಕರಿಸಿದ ಸೆಹ್ವಾಗ್?
Team Udayavani, Jan 2, 2017, 3:45 AM IST
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಫ್ರಾಂಚೈಸಿಯಾದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಿರ್ದೇಶಕರಾಗಿ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಮುಂದುವರಿಯುವ ಸಾಧ್ಯತೆಯಿದೆ.
ಸಂಜಯ್ ಬಂಗಾರ್ ರಾಜೀನಾಮೆಯಿಂದ ತೆರವಾದ ಮುಖ್ಯ ಕೋಚ್ ಹುದ್ದೆಯನ್ನು ಹೊತ್ತುಕೊಳ್ಳುತ್ತಾರೆಂದು ಹೇಳಲಾಗಿದ್ದರೂ ಸೆಹ್ವಾಗ್ ಈ ಅವಕಾಶವನ್ನು ನಿರಾಕರಿಸಿದ್ದಾರೆನ್ನಲಾಗಿದೆ. ಈ ಹುದ್ದೆಯಲ್ಲಿ ಅವರಿಗೆ ಆಸಕ್ತಿಯಿಲ್ಲ ಎಂದು ಮೂಲಗಳು ತಿಳಿಸಿದೆ. ಆದ್ದರಿಂದ ಪಂಜಾಬ್ ತಂಡ ಹೊಸ ಕೋಚ್ ಹುಡುಕಾಟದಲ್ಲಿದೆ, ಭಾರತೀಯ ಮೂಲದವರೇ ಆಗಿರಬೇಕೆಂಬ ಷರತ್ತನ್ನೂ ಇಟ್ಟಿದೆ. ಸಂಜಯ್ ಬಂಗಾರ್ ಸದ್ಯ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.