ಮುಂದುವರಿದೀತೇ ಚೆನ್ನೈ ಓಟ? ದ್ವಿತೀಯ ಸುತ್ತಿನಲ್ಲಿ ಎದುರಾಗಲಿದೆ ಪಂಜಾಬ್ ಕಿಂಗ್ಸ್‌


Team Udayavani, Apr 25, 2022, 8:00 AM IST

thumb 2

ಮುಂಬಯಿ : ಎರಡನೇ ಗೆಲುವಿನ ರುಚಿ ಕಂಡಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ತೀರಾ ಕಳಪೆ ಪ್ರದರ್ಶನ ನೀಡಿರುವ ಪಂಜಾಬ್‌ ಕಿಂಗ್ಸ್‌ ಸೋಮವಾರ ದ್ವಿತೀಯ ಸುತ್ತಿನಲ್ಲಿ ಎದುರಾಗಲಿವೆ.

ಚೆನ್ನೈ ಮುಂದಿನ ಸುತ್ತಿನ ರೇಸ್‌ನಲ್ಲಿ ಉಳಿಯಬೇಕಾದರೆ ಇನ್ನು ಮುಂದೆ ಪ್ರತೀ ಪಂದ್ಯವನ್ನೂ ದೊಡ್ಡ ಅಂತರದಲ್ಲಿ ಗೆಲ್ಲುತ್ತ ಹೋಗಬೇಕು. ಎರಡು ದಿನಗಳ ಹಿಂದೆ ಮುಂಬೈಯನ್ನು ಅಂತಿಮ ಎಸೆತದಲ್ಲಿ ಮಣಿಸಿದ್ದನ್ನು ಕಂಡಾಗ ಜಡೇಜ ಪಡೆಗೆ ಅದೃಷ್ಟ ಒಲಿದಿರುವ ಸೂಚನೆಯೊಂದು ಸಿಕ್ಕಿದೆ. ಇದೇ ಜೋಶ್‌ನಲ್ಲಿ ಮುಂದುವರಿದರೆ ಚೆನ್ನೈ ಮೇಲೆ ನಿರೀಕ್ಷೆ ಇರಿಸಿಕೊಳ್ಳಲಡ್ಡಿಯಿಲ್ಲ.

ಹಾಗೆಯೇ ಪಂಜಾಬ್‌ಗೂ ಇದು ಮಹತ್ವದ ಪಂದ್ಯ. ಅಂಕಪಟ್ಟಿಯಲ್ಲಿ ಅಗರ್ವಾಲ್‌ ಬಳಗ ಬಹಳ ಮೇಲ್ಮಟ್ಟದಲ್ಲಂತೂ ಇಲ್ಲ. ಮುಂಬೈ, ಚೆನ್ನೈ ಬಳಿಕ ಕೆಳಗಿನಿಂದ ತೃತೀಯ ಸ್ಥಾನಿಯಾಗಿದೆ. 7 ಪಂದ್ಯಗಳಲ್ಲಿ ಮೂರನ್ನಷ್ಟೇ ಜಯಿಸಿದೆ. ಇನ್ನು ಸೋಲುತ್ತ ಹೋದರೆ ಪಂಜಾಬ್‌ ಪ್ಲೇ-ಆಫ್‌ ದಾರಿ ಮುಚ್ಚಲ್ಪಡಬಹುದು.

4 ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶೋಚನೀಯ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪಂಜಾಬ್‌ ಕೇವಲ 115ಕ್ಕೆ ಗಂಟುಮೂಟೆ ಕಟ್ಟಿತ್ತು. ಡೆಲ್ಲಿ ಈ ಮೊತ್ತವನ್ನು ಒಂದೇ ವಿಕೆಟ್‌ ಕಳೆದುಕೊಂಡು ಚೇಸ್‌ ಮಾಡಿತ್ತು. ಈ ಆಘಾತದಿಂದ ಪಂಜಾಬ್‌ ಹೊರಬರಬೇಕಿದೆ.

ಚೆನ್ನೈಗೆ ಸೇಡಿನ ಪಂದ್ಯ
ಪಂಜಾಬ್‌ ತಂಡವನ್ನು ಎದುರಿಸುವ ವೇಳೆ ಚೆನ್ನೈ ಗಮನದಲ್ಲಿರುವುದು ಸೇಡು. ಎ. 3ರಂದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ 54 ರನ್ನುಗಳಿಂದ ಚೆನ್ನೈಯನ್ನು ಕೆಡವಿತ್ತು. ಪಂಜಾಬ್‌ 8 ವಿಕೆಟಿಗೆ 180 ರನ್‌ ಬಾರಿಸಿದರೆ, ಚೆನ್ನೈ 18 ಓವರ್‌ಗಳಲ್ಲಿ 126ಕ್ಕೆ ಕುಸಿದಿತ್ತು. ಶಿವಂ ದುಬೆ ಹೊರತುಪಡಿಸಿ ಚೇಸಿಂಗ್‌ ವೇಳೆ ಯಾರೂ ಕ್ಲಿಕ್‌ ಆಗಿರಲಿಲ್ಲ. ಪಂಜಾಬ್‌ ಸಾಂಘಿಕ ಬೌಲಿಂಗ್‌ ಮೂಲಕ ಯಶಸ್ಸು ಸಾಧಿಸಿತ್ತು. ದಾಳಿಗಿಳಿದ ಆರೂ ಮಂದಿ ವಿಕೆಟ್‌ ಹಂಚಿಕೊಂಡಿದ್ದರು. ಇವರಲ್ಲಿ ರಾಹುಲ್‌ ಚಹರ್‌ (25ಕ್ಕೆ 3) ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಲಿಯಮ್‌ ಲಿವಿಂಗ್‌ಸ್ಟೋನ್‌ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದಿ ದ್ದರು. 60 ರನ್‌ ಬಾರಿಸುವ ಜತೆಗೆ 2 ವಿಕೆಟ್‌ ಕೂಡ ಉರುಳಿಸಿದ್ದರು.

ಗಾಯಕ್ವಾಡ್‌, ಉತ್ತಪ್ಪ, ರಾಯುಡು, ಮೊಯಿನ್‌ ಅಲಿ, ದುಬೆ ಅವರನ್ನೊಳಗೊಂಡ ಚೆನ್ನೈ ಬ್ಯಾಟಿಂಗ್‌ ಲೈನ್‌ಅಪ್‌ ಮೇಲ್ನೋಟಕ್ಕೆ ಬಲಿಷ್ಠವಾಗಿಯೇ ಇದೆ. ಆದರೆ ಯಾರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡು ತ್ತಿಲ್ಲ, ಸ್ಥಿರವಾದ ಆಟವನ್ನೂ ಆಡು ತ್ತಿಲ್ಲ. ಮುಂಬೈ ವಿರುದ್ಧದ ಪಂದ್ಯವನ್ನು ಫಿನಿಶ್‌ ಮಾಡಲು ಸೀನಿಯರ್‌ ಮೋಸ್ಟ್‌ ಕ್ರಿಕೆಟಿರ್‌ ಧೋನಿಯೇ ಬರಬೇಕಾದುದು ವಿಪರ್ಯಾಸ!

ಹಳೆ ಹುಲಿ ಡ್ವೇನ್‌ ಬ್ರಾವೊ ಚಾರ್ಮ್ ಕಳೆದುಕೊಂಡಿರುವುದು, ಪ್ರಧಾನ ವೇಗಿ ದೀಪಕ್‌ ಚಹರ್‌ ಹೊರಬಿದ್ದಿರುವುದು ಜಡೇಜ ಬಳಗಕ್ಕೆ ಎದುರಾಗಿರುವ ದೊಡ್ಡ ಹೊಡೆತ. ಆದರೆ ಕಳೆದ ಪಂದ್ಯದಲ್ಲಿ ಮುಕೇಶ್‌ ಚೌಧರಿ ಬೌಲಿಂಗ್‌ ಜಾದೂ ಮಾಡಿರುವುದನ್ನು ಮರೆಯುವಂತಿಲ್ಲ. ಅವರು ಒಂದೇ ಓವರ್‌ನಲ್ಲಿ ಮುಂಬೈ ಆರಂಭಿಕರಾದ ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದ್ದರು. ಹೀಗಾಗಿ ಚೌಧರಿ ಮೇಲೆ ಚೆನ್ನೈ ಭಾರೀ ನಂಬಿಕೆ ಇರಿಸಿದೆ.

ಪಂಜಾಬ್‌ ಅಸ್ಥಿರ ಪ್ರದರ್ಶನ
ಪಂಜಾಬ್‌ ಕಿಂಗ್ಸ್‌ ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ತಂಡ. ಧವನ್‌, ಅಗರ್ವಾಲ್‌, ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌ ಇಲ್ಲಿನ ಪ್ರಮುಖರು. ಇವರಲ್ಲಿ ಲಿವಿಂಗ್‌ಸ್ಟೋನ್‌ ಹೊರತು ಪಡಿಸಿ ಉಳಿದವರಿನ್ನೂ ನೈಜ ಆಟಕ್ಕೆ ಕುದುರಿಕೊಂಡಿಲ್ಲ. ಜಾನಿ ಬೇರ್‌ಸ್ಟೊ ಸತತ 4 ಪಂದ್ಯಗಳಲ್ಲಿ ಫೇಲ್‌ ಆಗಿರುವುದು ತಂಡದ ಪಾಲಿನ ಚಿಂತೆಯ ಸಂಗತಿ. ಇವರ ಬದಲು ಶ್ರೀಲಂಕಾದ ಭನುಕ ರಾಜಪಕ್ಸ ಆಡುವ ಸಾಧ್ಯತೆ ಇದೆ. ಹಾಗೆಯೇ ರಿಷಿ ಧವನ್‌, ಸಂದೀಪ್‌ ಶರ್ಮ ಮೊದಲಾದವರು ಕೂಡ ಕಾಯಿತ್ತಿದ್ದಾರೆ. ಪೇಸ್‌ ಬೌಲಿಂಗ್‌ ಆಲ್‌ರೌಂಡರ್‌ ಒಡೀನ್‌ ಸ್ಮಿತ್‌, ಪ್ರಧಾನ ವೇಗಿ ಕಾಗಿಸೊ ರಬಾಡ, ಆರ್ಷದೀಪ್‌ ಸಿಂಗ್‌, ವೈಭವ್‌ ಅರೋರ ಅವರೆಲ್ಲ ಸಿಡಿದು ನಿಂತರೆ ಪಂಜಾಬ್‌ ಮತ್ತೆ ಗೆಲುವಿನ ಹಳಿ ಏರೀತು.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.