ಆರ್ ಸಿಬಿ – ಸನ್ ರೈಸರ್ಸ್ : ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ
Team Udayavani, Sep 21, 2020, 7:02 PM IST
ಆಬುಧಾಬಿ : ಐಪಿಎಲ್ ಮೂರನೇ ಪಂದ್ಯ ಆರ್ ಸಿ ಬಿ – ಸನ್ ರೈಸರ್ಸ್ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ರಾಯಲ್ ಚಾಲೆಂಜರ್ ಮತ್ತು ಹೈದರಾಬಾದ್ ಈ ವರೆಗೆ15 ಪಂದ್ಯಗಳನ್ನು ಆಡಿದೆ. ಅವುಗಳ ಪೈಕಿ 8 ಪಂದ್ಯಗಳನ್ನು ಹೈದರಾಬಾದ್ ಗೆದ್ದಿದ್ದರೆ, ಬೆಂಗಳೂರು 6 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯವು ಡ್ರಾ ನಲ್ಲಿ ಅಂತ್ಯವಾಗಿದೆ. ಹೈದರಾಬಾದ್ನಲ್ಲಿ ವಾರ್ನರ್ ಹೊರತುಪಡಿಸಿ ಜಾನಿ ಬೈಸ್ಟೋವ್, ಕೇನ್ ವಿಲಿಯಮ್ಸನ್ ಪ್ರಿಯಮ್ ಗಾರ್ಗ್ ಮತ್ತು ಮನೀಶ್ ಪಾಂಡೆ ಅವರಂತಹ ಬ್ಯಾಟಿಂಗ್ ಬಲವಿದೆ. ಭುವನೇಶ್ವರ್ ಕುಮಾರ್ ಅವರಲ್ಲದೆ ಖಲೀಲ್ ಅಹ್ಮದ್ ಮತ್ತು ವಿರಾಟ್ ಸಿಂಗ್ ಕೂಡ ಬೌಲಿಂಗ್ನಲ್ಲಿ ಶಕ್ತಿ ತುಂಬಲಿದ್ದಾರೆ.
ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಎಬಿ ಡಿವಿಲಿಯರ್ಸ್ ಮತ್ತು ಆರನ್ ಫಿಂಚ್ ನಂತಹ ಶ್ರೇಷ್ಟ ಬ್ಯಾಟ್ಸ್ಮನ್ಗಳಿದ್ದಾರೆ. ಆಲೌರೌಂಡರ್ಗಳಲ್ಲಿ ಕ್ರಿಸ್ ಮೋರಿಸ್, ಮೊಯಿನ್ ಅಲಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೊಂದಿದೆ. ಬೌಲಿಂಗ್ ವಿಭಾಗದಲ್ಲಿ, ಯುಜ್ವೇಂದ್ರ ಚಹಲ್ ಹೊರತುಪಡಿಸಿ, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ಅವರ ಸೇವೆ ಆರ್ಸಿಬಿ ಪಾಲಿಗೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ