ಡೆಲ್ಲಿ vs ಆರ್ ಸಿಬಿ : ಹೈವೋಲ್ಟೇಜ್ ಕದನ : ಟಾಸ್ ಗೆದ್ದ ಅಯ್ಯರ್ ಪಡೆ ಬೌಲಿಂಗ್ ಆಯ್ಕೆ

Team Udayavani, Nov 2, 2020, 7:01 PM IST

01

ಅಬುಧಾಬಿ :  ಐಪಿಎಲ್ ನ 55 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಟಪಿಟಲ್ಸ್ ಹಾಗೂ ಆರ್ ಸಿಬಿ ತಂಡಗಳು ಸೆಣೆಸಾಟ ನಡೆಸಲಿವೆ. ಟಾಸ್ ಗೆದ್ದ ಡೆಲ್ಲಿ ಬಾಯ್ಸ್ ಬೌಲಿಂಗ್ ಆಯ್ದುಕೊಂಡಿದೆ.

ಈ ವರೆಗೆ ಐಪಿಎಲ್‌ ಪ್ರಶಸ್ತಿ ಜಯಿಸದ ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳೆರಡೂ ಮೇಲ್ನೋಟಕ್ಕೆ ಬಲಿಷ್ಠವಾಗಿವೆ. ಆದರೆ ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ. ಹೀಗಾಗಿ ಭವಿಷ್ಯ ನುಡಿಯುವುದು ಕಷ್ಟ. ಹಾಗೆಯೇ ಯಾರು ಮೇಲೆ ಬಂದರೆ ಹೆಚ್ಚಿನ ಲಾಭವಿದೆ ಎಂಬ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಬಹುದು!

ಆರ್ಸಿಬಿ ಮಧ್ಯಮ ಕ್ರಮಾಂಕ ದುರ್ಬಲ :
ಆರ್‌ಸಿಬಿಯ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ. ಪಡಿಕ್ಕಲ್‌ ಈ ಸರಣಿಯ ಹೀರೋ ಆಗಿದ್ದಾರೆ. ಇವರ ಜತೆಗಾರನಾಗಿ ಮತ್ತೆ ಫಿಂಚ್‌ ಕಣಕ್ಕಿಳಿಯಬಹುದು. ಆದರೆ ಮಿಡ್ಲ್ ಆರ್ಡರ್‌ ಗಟ್ಟಿ ಇಲ್ಲ. ನಾಯಕ ಕೊಹ್ಲಿ, ಎಬಿಡಿ ಈ ಪಂದ್ಯದಲ್ಲಿ ಸಿಡಿಯಲೇ ಬೇಕಿದೆ. ಇವರಿಬ್ಬರ ನಿರ್ಗಮನದ ಬಳಿಕ ಇನ್ನಿಂಗ್ಸ್‌ ಬೆಳೆಸಬಲ್ಲ ಆಟಗಾರರಿಲ್ಲ. ಗುರುಕೀರತ್‌ ಬದಲು ಪಾರ್ಥಿವ್‌ ಪಟೇಲ್‌ ಮೊದಲ ಅವಕಾಶ ಪಡೆದರೆ ಅಚ್ಚರಿ ಇಲ್ಲ. ಆರ್‌ಸಿಬಿ ಬೌಲಿಂಗ್‌ ಡೆಲ್ಲಿ ತಂಡದಷ್ಟು ಬಲಿಷ್ಠವಾಗಿಲ್ಲ ಎಂಬುದನ್ನು ಒಪ್ಪಲೇಬೇಕು.

ಡೆಲ್ಲಿಗೆ ಬ್ಯಾಟಿಂಗ್ಚಿಂತೆ :
ಆರಂಭದಲ್ಲಿ ಡೆಲ್ಲಿ ತೋರಿದ ಪ್ರದರ್ಶನ ಕಂಡಾಗ ಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿ ಗೋಚರಿಸಿತ್ತು. ಆದರೆ ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ ಆಫ್ಗೆ ತೇರ್ಗಡೆಯಾಗುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದೆ. ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಧವನ್‌, ನಾಯಕ ಅಯ್ಯರ್‌, ಮಾರ್ಕಸ್‌ ಸ್ಟೋಯಿನಿಸ್‌ ಈಗ ತೀವ್ರ ರನ್‌ ಬರಗಾಲದಲ್ಲಿದ್ದಾರೆ. ವಿಂಡೀಸ್‌ ಹಿಟ್ಟರ್‌ ಹೆಟ್‌ಮೈರ್‌, ಪಂತ್‌, ಪೃಥ್ವಿ ಶಾ ಇದುವರೆಗೆ ಒಂದೇ ಒಂದು “ಹಿಟ್‌ ಶೋ’ ನೀಡಿಲ್ಲ. ಇವರೆಲ್ಲ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದರಷ್ಟೇ ತಂಡಕ್ಕೆ ಲಾಭ. ಬೌಲಿಂಗ್‌ ವಿಭಾಗ ರಬಾಡ, ನೋರ್ಜೆ ಮತ್ತು ಆರ್‌. ಅಶ್ವಿ‌ನ್‌ ಅವರನ್ನು ಅವಲಂಬಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ಜೋಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ಕೀಪರ್), ವಾಷಿಂಗ್ಟನ್ ಸುಂದರ್, ಶಿವಮ್ ಡ್ಯೂಬ್, ಶಹಬಾಜ್ ಅಹ್ಮದ್, ಕ್ರಿಸ್ ಮೋರಿಸ್, ಇಸುರು ಉದಾನಾ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್.

ಡೆಲ್ಲಿ ಕ್ಯಾಟಪಿಟಲ್ಸ್ ( ಪ್ಲೇಯಿಂಗ್  ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ಕೀಪರ್), ಮಾರ್ಕಸ್ ಸ್ಟೊಯಿನಿಸ್, ಡೇನಿಯಲ್ ಸ್ಯಾಮ್ಸ್, ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.