ಡ್ವೇನ್ ಬ್ರಾವೊ ಸ್ಥಾನಕ್ಕೆ ಇರ್ಫಾನ್ ಪಠಾಣ್
Team Udayavani, Apr 26, 2017, 2:14 PM IST
ಹೊಸದಿಲ್ಲಿ: ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರಿಗೆ ಕೊನೆಗೂ 10ನೇ ಐಪಿಎಲ್ ಬಾಗಿಲು ತೆರೆದಿದೆ. ಗುಜರಾತ್ ಲಯನ್ಸ್ ತಂಡದ ಗಾಯಾಳು ಆಟಗಾರ, ವೆಸ್ಟ್ ಇಂಡೀಸಿನ ಡ್ವೇನ್ ಬ್ರಾವೊ ಬದಲು ಪಠಾಣ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ಮಾರಾಟವಾಗದೆ ಉಳಿದ ಪ್ರಮುಖ ಕ್ರಿಕೆಟಿಗರಲ್ಲಿ ಇರ್ಫಾನ್ ಪಠಾಣ್ ಕೂಡ ಒಬ್ಬರಾಗಿದ್ದರು. ಅವರಿಗೆ 50 ಲಕ್ಷ ರೂ. ಮೂಲಬೆಲೆ ನಿಗದಿಗೊಳಿಸಲಾಗಿತ್ತು. 2 ಸಲ ಪಠಾಣ್ ಹೆಸರನ್ನು ಕೂಗಲಾಯಿತಾದರೂ ಯಾರೂ ಅವರನ್ನು ಖರೀದಿಸಲು ಆಸಕ್ತಿ ತೋರಲಿಲ್ಲ. ಎಡ ಮಂಡಿಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಡ್ವೇನ್ ಬ್ರಾವೊ ಐಪಿಎಲ್ ಆಡಲೆಂದೇ ಭಾರತಕ್ಕೆ ಬಂದಿದ್ದರೂ ಇನ್ನೂ ಚೇತರಿಸಿಕೊಳ್ಳದ ಕಾರಣ ಈ ಕೂಟದಿಂದ ಹೊರಗುಳಿಯುವುದು ಅನಿವಾರ್ಯವಾಯಿತು. 32ರ ಹರೆಯದ ಇರ್ಫಾನ್ ಪಠಾಣ್ ಕಳೆದ 9 ಐಪಿಎಲ್ ಋತುಗಳಲ್ಲಿ 5 ಫ್ರಾಂಚೈಸಿಗಳ ಪರ 102 ಪಂದ್ಯಗಳನ್ನಾಡಿದ್ದು, 80 ವಿಕೆಟ್ ಹಾಗೂ 1,137 ರನ್ ಸಂಪಾದಿಸಿದ್ದಾರೆ.
‘ಇಂಥದೊಂದು ಅದ್ಭುತ ತಂಡದ ಭಾಗವಾಗಿ ಆಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಗುಜರಾತ್ ಜೆರ್ಸಿ ಧರಿಸಿದ ಇರ್ಫಾನ್ ಟ್ವೀಟ್ ಮಾಡಿದ್ದಾರೆ. ಪಠಾಣ್ ಈವರೆಗೆ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ಡೆವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಹೈ ದರಾಬಾದ್ ಮತ್ತು ರೈಸಿಂಗ್ ಪುಣೆ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ