ಬಿಸಿಸಿಐ ಚುನಾವಣೆ ಸನ್ನಿಹಿತ?
Team Udayavani, Aug 7, 2019, 5:15 AM IST
ಮುಂಬಯಿ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ಚುನಾವಣೆ ನಡೆಸುವ ಗಳಿಗೆ ಕಡೆಗೂ ಸನ್ನಿಹಿತವಾಗುತ್ತಿರುವಂತೆ ಕಾಣಿಸುತ್ತಿದೆ. ರಾಜ್ಯಗಳ 37 ಅಸೋಸಿಯೇಶನ್ಗಳ ಪೈಕಿ 26 ಅಸೋಸಿಯೇಶನ್ಗಳು ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬಿಸಿಸಿಐ ಹೊಸ ಸಂವಿಧಾನವನ್ನು ಒಪ್ಪಿಕೊಂಡು ಚುನಾವಣೆ ನಡೆಸಲು ತಯಾರಾಗಿವೆ.
ಇನ್ನೂ ನಾಲ್ಕು ಅಸೊ.ಗಳು ಚುನಾವಣೆ ತಯಾರಿ ನಡೆಸುತ್ತಿವೆ. 26 ಅಸೋ.ಗಳು ಈಗಾಗಲೇ ಚುನಾವಣಾ ಅಧಿಕಾರಿಯನ್ನೂ ನೇಮಿಸಿಕೊಂಡಿವೆ. ಹೀಗಾಗಿ 30 ಸದಸ್ಯರ ಪರಿಪೂರ್ಣ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದೇವೆ. ಎಂದು ನ್ಯಾಯಾಲಯ ನೇಮಿಸಿರುವ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದ್ದಾರೆ.
ಎರಡು ವರ್ಷಗಳಿಂದ ಆಡಳಿತ ಸಮಿತಿ ಹೊಂದಿಲ್ಲ
2 ವರ್ಷಗಳಿಂದ ಬಿಸಿಸಿಐ ಆಡಳಿತ ಸಮಿತಿಯನ್ನು ಹೊಂ ದಿಲ್ಲ. ರಾಯ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿರುವ ತಾತ್ಕಾಲಿಕ ಸಮಿತಿಯೇ ಬಿಸಿಸಿಐ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಇದರಿಂದಾಗಿ ಆಡಳಿತದಲ್ಲಿ ಗೊಂದಲಗಳು ಉಂಟಾಗುತ್ತಿರುವುದು ಮಾತ್ರವ ಲ್ಲದೆ ವಿವಿಧ ಕ್ರಿಕೆಟ್ ಮಂಡಳಿಗಳ ನಡುವೆ ಸೌಹಾರ್ದಯುತ ವಾತಾವರಣವೂ ಇಲ್ಲದಂತಾಗಿದೆ.
ಅಕ್ಟೋಬರ್ 22ರಂದು ಬಿಸಿಸಿ ಐಗೆ ಚುನಾವಣೆ ನಡೆಸಬೇಕೆಂದು ಆಡಳಿತ ಸಮಿತಿ ನಿರ್ಧರಿಸಿದೆ. ಇದ ಕ್ಕೂ ಮೊದಲು ರಾಜ್ಯಗಳ ಕ್ರಿಕೆಟ್ ಅಸೋ.ಗಳಿಗೆ ಚುನಾವಣೆ ನಡೆದು ಆಡಳಿತ ಮಂಡಳಿಗಳು ಅಸ್ತಿತ್ವಕ್ಕೆ ಬರಬೇಕು.