ಐದು ವಿಕೆಟ್ ಕಿತ್ತು ಕಿವೀಸ್ ಗೆ ಕಾಡಿದ ಇಶಾಂತ್ ಶರ್ಮ ಹೊಸ ದಾಖಲೆ

Team Udayavani, Feb 23, 2020, 2:40 PM IST

ವೆಲ್ಲಿಂಗ್ಟನ್: ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ತಡವಾಗಿ ಕೂಡಿಕೊಂಡರೂ ವೇಗಿ ಇಶಾಂತ್ ಶರ್ಮಾ ಮೊದಲ ಇನ್ನಿಂಗ್ಸ್ ನಲ್ಲಿಯೇ ಕಮಾಲ್ ಮಾಡಡಿದ್ದಾರೆ.

ಮೊದಲ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಎರಡು ವಿಕೆಟ್ ಪಡೆದ ಇಶಾಂತ್ ಇನ್ನಿಂಗ್ಸ್ ನಲ್ಲಿ ಒಟ್ಟು ಐದು ವಿಕೆಟ್ ಪಡೆದರು. ಇದು ಇಶಾಂತ್ ಶರ್ಮಾರ 11 ನೇ ಐದು ವಿಕೆಟ್ ಗೊಂಚಲು. ಟೆಸ್ಟ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಜಹೀರ್ ಖಾನ್ ಕೂಡಾ ಟೆಸ್ಟ್ ನಲ್ಲಿ 11 ಸಲ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಜಹೀರ್ ಖಾನ್ 92 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರೆ, ಶರ್ಮಾಗಿದು 97ನೇ ಟೆಸ್ಟ್. 23 ಸಲ ಐದು ವಿಕೆಟ್ ಪಡೆದಿರುವ ಕಪಿಲ್ ದೇವ್ ಈ ಪಟ್ಟಿಯಲ್ಲಿರುವ ಮೊದಲಿಗ.

ಇಷ್ಟೇ ಅಲ್ಲದೆ ವಿದೇಶಿ ಟೆಸ್ಟ್ ನಲ್ಲಿ ಅತೀ ಹೆಚ್ಚು ಐದು ವಿಕೆಟ್ ಪಡೆದ ಸಾಲಿನಲ್ಲಿ ಇಶಾಂತ್ ಗೆ ಮೂರನೇ ಸ್ಥಾನ. ವಿದೇಶದಲ್ಲಿ ಇಶಾಂತ್ 9 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ಧಾರೆ. ಕಪಿಲ್ ದೇವ್ 12 ಮತ್ತು ಅನಿಲ್ ಕುಂಬ್ಳೆ 10 ಮೊದಲೆರಡು ಸ್ಥಾನದಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ