ಇಳವೆನಿಲ್ ಬಂಗಾರದ ಕಮಾಲ್
ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್
Team Udayavani, Aug 30, 2019, 5:55 AM IST
ರಿಯೋ ಡಿ ಜನೈರೋ: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಇಳವೆನಿಲ್ ವಲರಿವನ್ ಮಹಾನ್ ಸಾಧನೆಗೈದಿದ್ದಾರೆ. ಅವರು ಸೀನಿಯರ್ ವಿಭಾಗದಲ್ಲಿ ತಮ್ಮ ಮೊದಲ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಳವೆನಿಲ್ 10 ಮೀ. ಏರ್ ರೈಫಲ್ನಲ್ಲಿ ಬಂಗಾರಕ್ಕೆ ಗುರಿ ಇರಿಸಿದರು.ಆದರೆ ಭಾರತದ ಭರವಸೆಯ ಶೂಟರ್ಗಳಾದ ಅಪೂರ್ವಿ ಚಂದೇಲ ಮತ್ತು ಅಂಜುಮ್ ಮೌದ್ಗಿಲ್ ಗುರಿ ತಪ್ಪುವ ಮೂಲಕ ನಿರಾಸೆ ಮೂಡಿಸಿದರು.
ಇದೇ ಮೊದಲ ಬಾರಿ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ 20 ವರ್ಷದ ಇಳವೆನಿಲ್ ಫೈನಲ್ನಲ್ಲಿ 251.7 ಅಂಕ ಗಳಿಸಿ ಅಗ್ರಸ್ಥಾನಿಯಾದರು. ಬ್ರಿಟನ್ನ ಸಿಯೋನೇಟ್ ಮೆಕಿಂತೋಷ್ 250.6 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೈನೀಸ್ ತೈಪೆಯ ಯಿಂಗ್ ಶಿನ್ ಲೀ ಕಂಚು ಗೆದ್ದರು.
ಇಳವೆನಿಲ್ ಸಾಧನೆಯೊಂದಿಗೆ ಭಾರತ ಒಂದೇ ವರ್ಷದಲ್ಲಿ 10 ಮೀ. ಶೂಟಿಂಗ್ ವಿಭಾಗದ 4 ಚಿನ್ನದ ಪದಕಗಳಲ್ಲಿ ಮೂರನ್ನು ಜಯಿಸಿದ ಸಾಧನೆ ಮಾಡಿತು. ಇಳವೆನಿಲ್ ಏಶ್ಯನ್ ಚಾಂಪಿಯನ್ನ ಜೂ. ವಿಭಾಗದಲ್ಲಿಯೂ ಚಿನ್ನದ ಪದಕ ಜಯಿಸಿದ ದಾಖಲೆ ಹೊಂದಿದ್ದಾರೆ.
ಅಪೂರ್ವಿ, ಅಂಜುಮ್ ನಿರಾಸೆ
ಅರ್ಹತಾ ಸುತ್ತಿನಲ್ಲಿ ಇಳವೆನಿಲ್ ಹಿರಿಯ ಶೂಟರ್ ಅಂಜುಮ್ ಮೌದ್ಗಿಲ್ ಅವರನ್ನೇ ಹಿಂದಿಕ್ಕಿದರು. ಇಬ್ಬರೂ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದೊಂದಿಗೆ 8 ಸ್ಪರ್ಧಿಗಳ ಫೈನಲ್ ತಲುಪಿದರು. ಇಲ್ಲಿ ಅಂಜುಮ್ 6ನೇ ಸ್ಥಾನ ಪಡೆದರು. ಆದರೆ ವಿಶ್ವದ ನಂಬರ್ ವನ್ ಹಾಗೂ ಫೈನಲ್ಸ್ ವಿಶ್ವದಾಖಲೆ ಹೊಂದಿರುವ ಅಪೂರ್ವಿ ಚಂದೇಲ 11ನೇ ಸ್ಥಾನಕ್ಕೆ ಕುಸಿದು (627.7 ಅಂಕ) ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ