ಇದು ವಿಭಿನ್ನ ಟ್ರ್ಯಾಕ್‌ ಆಗಿತ್ತು: ರಾಹುಲ್‌

Team Udayavani, Jan 27, 2020, 6:45 AM IST

kl-rahul

ಆಕ್ಲೆಂಡ್‌: ಮೊದಲ ಹಾಗೂ ಎರಡನೇ ಟಿ20 ಪಂದ್ಯದಲ್ಲಿ ತಾನು ಒಂದೇ ರೀತಿಯಲ್ಲಿ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದರೂ ಇದು ವಿಭಿನ್ನ ಟ್ರ್ಯಾಕ್‌ ಆಗಿತ್ತು ಎಂದು ಪಂದ್ಯಶ್ರೇಷ್ಠ ರಾಹುಲ್‌ ಅಭಿಪ್ರಾಯಪಟ್ಟಿದ್ದಾರೆ.

“ಇಂದು ಬೇರೆಯದೇ ಆದ ಪರಿಸ್ಥಿತಿ ಇತ್ತು. ಟಾರ್ಗೆಟ್‌ ಕೂಡ ಕಡಿಮೆ ಇತ್ತು. ಹಾಗೆಯೇ ಪಿಚ್‌ ಕೂಡ ಬೇರೆ ರೀತಿ ವರ್ತಿಸುತ್ತಿತ್ತು. ಹೀಗಾಗಿ ನನ್ನ ಮೇಲಿನ ಜವಾಬ್ದಾರಿ ಕೂಡ ಬೇರೆ ಮಟ್ಟದ್ದಾಗಿತ್ತು…’ ಎಂದು ರಾಹುಲ್‌ ಹೇಳಿದರು.
“ನಾವು ರೋಹಿತ್‌ ಮತ್ತು ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡೆವು.

ಹೀಗಾಗಿ ನಾನು ಕ್ರೀಸ್‌ ಆಕ್ರಮಿಸಿಕೊಳ್ಳಬೇಕಿತ್ತು. ಮೊನ್ನೆಯ ಪಿಚ್‌ ಸಂಪೂರ್ಣ ವಾಗಿ ಬ್ಯಾಟಿಂಗಿಗೆ ಸಹಕರಿಸುತ್ತಿತ್ತು. ಇಂದು ಬೇರೆ ಟ್ರ್ಯಾಕ್‌ನಲ್ಲಿ ಆಡಲಾಯಿತು. ಇದು ಬೌಲರ್‌ಗಳಿಗೂ ನೆರವು ನೀಡುತ್ತಿತ್ತು. ಆದರೆ ನಾನು ಸಹಜ ಆಟಕ್ಕೆ ಹೆಚ್ಚಿನ ಒತ್ತು ನೀಡಿದೆ’ ಎಂಬುದಾಗಿ ರಾಹುಲ್‌ ಹೇಳಿದರು.

ಯಾವ ಕ್ರಮಾಂಕದಲ್ಲಿ ಆಡಿದರೂ ಸ್ಥಿರವಾದ ಬ್ಯಾಟಿಂಗ್‌ ಪ್ರದರ್ಶನ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌, “ಇದಕ್ಕೆ ಏನೆಂದು ಹೇಳಲಿ… ನನ್ನ ಆಟವನ್ನು ಚೆನ್ನಾಗಿ ಅರ್ಥೈಸಿಕೊಂಡ ಕಾರಣ ಇದು ಸಾಧ್ಯವಾಗಿರಬಹುದು. ರೈಟ್‌ ಶಾಟ್‌ ಸೆಲೆಕ್ಷನ್‌ ಪಾಲು ಕೂಡ ಇದರಲ್ಲಿದೆ. ಆದರೆ ನನಗೆ ಮೊದಲು ತಂಡ ಮುಖ್ಯ, ಅನಂತರ ಏನಿದ್ದರೂ ವೈಯಕ್ತಿಕ ನಿರ್ವಹಣೆ…’ ಎಂದರು.

ಭಾರತದ ಬೌಲರ್‌ಗಳು ಈ ಪಂದ್ಯವನ್ನು ಕಸಿದರು’ ಎಂಬುದು ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಪ್ರತಿಕ್ರಿಯೆ.

ಅನುಮಾನವೇ ಇಲ್ಲ. ಭಾರತದ ಬೌಲಿಂಗ್‌ ಅಮೋಘವಾಗಿತ್ತು. ಹೆಚ್ಚು ಶಿಸ್ತಿನಿಂದ ಕೂಡಿತ್ತು. ನಾವು ಪೇರಿಸಿದ ಮೊತ್ತ ಏನೂ ಸಾಲದು. ಇಂದಿನ ಪಿಚ್‌ ಮೊನ್ನೆಯಂತಿರಲಿಲ್ಲ. ಆದರೂ ನಾವು ಇನ್ನಷ್ಟು ರನ್‌ ಪೇರಿಸಬೇಕಿತ್ತು. ಈ ಲೆಕ್ಕಾಚಾರದಿಂದಲೇ ಬ್ಯಾಟಿಂಗ್‌ ಆಯ್ದುಕೊಂಡೆವು. ಆದರೆ ನಮ್ಮ ಲೆಕ್ಕಾಚಾರ ತಲೆಕೆಳಗಾಯಿತು.

-ಕೇನ್‌ ವಿಲಿಯಮ್ಸನ್‌

ಟಾಪ್ ನ್ಯೂಸ್

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.