ಜೊಹ್ರಿ ತನಿಖೆ: ಬಿಸಿಸಿಐ ಉದ್ಯೋಗಿ ಹೇಳಿಕೆ ಆಗತ್ಯ
Team Udayavani, Nov 11, 2018, 6:15 AM IST
ಮುಂಬಯಿ: ಮಿ ಟೂ ಪ್ರಕರಣದಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರ ವಿಚಾರಣೆ ನಡೆಸುತ್ತಿರುವ ಸ್ವತಂತ್ರ ಸಮಿತಿ, ಬಿಸಿಸಿಐ ಉದ್ಯೋಗಿಯೊಬ್ಬರ ವಿಚಾರಣೆಯನ್ನೂ ನಡೆಸಬೇಕೆಂದು ಖಜಾಂಚಿ ಅನಿರುದ್ಧ ಚೌಧರಿ ಒತ್ತಾಯಿಸಿದ್ದಾರೆ.
ಟ್ವಿಟರ್ ಖಾತೆಯೊಂದರಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಜೊಹ್ರಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಅನಂತರ ಅವರ ವಿರುದ್ಧ ತನಿಖೆ ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬಯಿ ಕ್ರಿಕೆಟ್ ತಂಡದ ಮಾಜಿ ನಾಯಕ ಶಿಶಿರ್ ಹಟ್ಟಂಗಡಿ ಕೂಡ ಜೊಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಿಸಿಸಿಐನ ಉದ್ಯೋಗಿಯೊಬ್ಬರಿಗೇ ಜೊಹ್ರಿ ತೊಂದರೆ ನೀಡಿದ್ದಾರೆ, ಅದರ ವಿರುದ್ಧ ಮಾಹಿತಿ ನೀಡಲು ಸಿದ್ಧ ಎಂದಿದ್ದರು. ಈಗ ಇದೇ ಬಿಸಿಸಿಐ ಉದ್ಯೋಗಿಯ ಹೇಳಿಕೆಯನ್ನೂ ಪಡೆಯಿರಿ ಎನ್ನುವುದು ಅನಿರುದ್ಧ್ ಚೌಧರಿ ಒತ್ತಾಯ. ಒಂದು ವೇಳೆ ಈ ಬೆಳವಣಿಗೆ ನಡೆದರೆ ಜೊಹ್ರಿ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಲಿದೆ ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ