ಗೆದ್ದ ಖುಷಿಗೆ ಜೈ ಶ್ರೀರಾಮ್ ಎಂದ ಕೇಶವ್ ಮಹಾರಾಜ್!
Team Udayavani, Jan 26, 2022, 5:00 AM IST
ಕೇಪ್‌ಟೌನ್: ಭಾರತ ವಿರುದ್ಧ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದ ಸಂಭ್ರಮ ದಕ್ಷಿಣ ಆಫ್ರಿಕಾದ್ದು. ಇದರ ಬೆನ್ನಲ್ಲೇ ಆ ತಂಡದ ಪ್ರಮುಖ ಸ್ಪಿನ್ನರ್ ಕೇಶವ ಮಹಾರಾಜ್ ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿ, “ಜೈ ಶ್ರೀರಾಮ್’ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.
“ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡಕ್ಕೆ ಇದಕ್ಕಿಂತ ಹೆಮ್ಮೆಯ ಸಂದರ್ಭ ಇರಲಾರದು. ಇಂಥದ್ದೊಂದು ಗಳಿಗೆಗಾಗಿ ಎಷ್ಟು ದೂರ ಸಾಗಿಬಂದಿದ್ದೇವೆ. ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇವೆ. ಜೈ ಶ್ರೀರಾಮ್’ ಎಂದು ಪೋಸ್ಟ್ ಮಾಡಿದ್ದಾರೆ.
ಕೇಶವ್ ಮಹಾರಾಜ್ ಪೂರ್ವಿಕರು ಭಾರತದವರು. 1874ರ ಸಂದರ್ಭದಲ್ಲಿ ಉತ್ತರಪ್ರದೇಶದ ಸುಲ್ತಾನ್‌ಪುರದಿಂದ ಇವರು ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿದ್ದರು. ಇವರ ತಂದೆ ಆತ್ಮಾನಂದ ಮಹಾರಾಜ್ ಕೂಡ ಕ್ರಿಕೆಟಿಗರು. ನಟಾಲ್ ಪ್ರಾಂತ್ಯದ ಪರ ಪ್ರ. ದರ್ಜೆ ಕ್ರಿಕೆಟ್ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್
ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್