ಸಿಂಧು, ಸೈನಾ ನೆಹ್ವಾಲ್‌ ಸವಾಲು ಅಂತ್ಯ

Team Udayavani, Sep 22, 2017, 9:32 AM IST

22-STATE-17.jpg

ಟೋಕಿಯೋ (ಜಪಾನ್‌): ಒಲಿಂಪಿಕ್ಸ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ತಾರೆಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಜಪಾನ್‌ ಓಪನ್‌ ಸೂಪರ್‌ ಸೀರೀಸ್‌ನಲ್ಲಿ 2ನೇ ಸುತ್ತಿನಲ್ಲಿ ಸೋಲುಂಡು ಹೊರ ನಡೆದಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯ ಆಟಗಾರರಾದ ಕೆ.ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕಳೆದ ವಾರ ವಿಶ್ವ ಚಾಂಪಿಯನ್‌ ನಜೊಮಿ ಒಕುಹರಾ ಅವರನ್ನು ಕೆಡಹಿ ಕೊರಿಯಾ ಓಪನ್‌ ಪ್ರಶಸ್ತಿ ಜಯಿಸಿದ್ದ ಭಾರತದ ಪಿವಿ ಸಿಂಧು ಜಪಾನ್‌ ಓಪನ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಅವರೆದುರೇ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.  

ಸತತ ಮೂರನೇ ಬಾರಿ ಸ್ಥಳೀಯ ಫೇವರಿಟ್‌ ಒಕುಹರಾ ಅವರನ್ನು ಎದುರಿಸಿದ ಸಿಂಧು ತನ್ನ ಶ್ರೇಷ್ಠ ಆಟವಾಡಲು ಅಸಮರ್ಥರಾದರು. 47 ನಿಮಿಷಗಳ ಹೋರಾಟದಲ್ಲಿ ಹಲವು ಅನಗತ್ಯ ತಪ್ಪುಗಳನ್ನು ಮಾಡಿದ ಸಿಂಧು 18-21, 18-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. ಕಳೆದ ಎರಡು ಹೋರಾಟಗಳಲ್ಲಿ ಅವ ರಿಬ್ಬರು ದೀರ್ಘ‌ ರ್ಯಾಲಿಗಳ ಕಾದಾಟ ನಡೆಸಿದ್ದರು. ಆದರೆ ಇಲ್ಲಿ ಅಂತಹ ಯಾವುದೇ ತೀವ್ರ ಸ್ಪರ್ಧೆಯನ್ನು ಸಿಂಧು ನೀಡಲಿಲ್ಲ. 110 ನಿಮಿಷಗಳ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಫೈನಲ್‌ ಸೆಣಸಾಟದಲ್ಲಿ ಸಿಂಧು ಸೋತಿದ್ದರೆ 83 ನಿಮಿಷಗಳ ಕೊರಿಯಾ ಓಪನ್‌ನ ಫೈನಲ್‌ನಲ್ಲಿ ಸಿಂಧು ಜಯಭೇರಿ ಬಾರಿಸಿದ್ದರು.

ಆರಂಭದಲ್ಲಿ ಸಿಂಧು 11-9 ಮ ತ್ತು 18-16 ಅಂತರದ ಅಲ್ಪ ಮುನ್ನಡೆ ಸಾಧಿಸಿದ್ದರು. ಆದರೆ ಆ ಬಳಿಕ ಸಿಂಧು ಕಳಪೆಯಾಗಿ ಆಡಿ ಪಂದ್ಯವನ್ನು ಕಳೆದುಕೊಂಡರು.  ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ 16-21, 13-21 ರಿಂದ ಸೋತಿದ್ದಾರೆ. ಸೈನಾ ಮೊದಲ ಗೇಮ್‌ನ ಆರಂಭದಲ್ಲಿ ಮುನ್ನಡೆ ಪಡೆದಿದ್ದರೂ ಪ್ರಯೋಜನವಾಗಲಿಲ್ಲ. ಸ್ಪೇನ್‌ ಆಟಗಾರ್ತಿ ನೇರ ಗೇಮ್‌ನಲ್ಲಿಯೇ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. 

ಈ ವರ್ಷ ಇಂಡೋನೇಶ್ಯ ಮತ್ತು ಆಸ್ಟ್ರೇಲಿಯದಲ್ಲಿ ಪ್ರಶಸ್ತಿ ಜಯಿಸಿದ್ದ ವಿಶ್ವದ ಎಂಟನೇ ರ್‍ಯಾಂಕಿನ ಶ್ರೀಕಾಂತ್‌ ಅವರು ಹಾಂಕಾಂಗ್‌ನ ಹು ಯುನ್‌ ಅವರನ್ನು 21-12, 21-11 ಗೇಮ್‌ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೇರಿದರು. ಶ್ರೀಕಾಂತ್‌ ಮುಂದಿನ ಸುತ್ತಿನಲ್ಲಿ ಇತ್ತೀಚೆಗೆ ವಿಶ್ವ ಚಾಂಪಿಯನ್‌ ಎನಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸೆಲ್‌ಸೆನ್‌ ಅವರನ್ನು ಎದುರಿಸಲಿದ್ದಾರೆ.

ಶ್ರೀಕಾಂತ್‌ ಮತ್ತು ಆ್ಯಕ್ಸೆಲ್‌ಸೆನ್‌ ನಾಲ್ಕು ಬಾರಿ ಮುಖಾಮುಖೀಯಾಗಿದ್ದು 2-2 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಕಳೆದ ಎರಡು ಹೋರಾಟಗಳ ಆರಂಭದಲ್ಲಿ ಶ್ರೀಕಾಂತ್‌ ಮೇಲುಗೈ ಸಾಧಿಸಿದ್ದರೂ ಆ್ಯಕ್ಸೆಲ್‌ಸೆನ್‌ ಜಯ ಸಾಧಿಸಿದ್ದರು.

ಪ್ರಣಯ್‌ ಕ್ವಾರ್ಟರ್‌ಫೈನಲಿಗೆ
ಯುಎಸ್‌ ಓಪನ್‌ ಚಾಂಪಿಯನ್‌ ಎಚ್‌ಎಸ್‌ ಪ್ರಣಯ್‌ ಚೈನೀಸ್‌ ತೈಪೆಯ ಸು ಜೆನ್‌ ಹಾವೊ ಅವರನ್ನು 21-16, 23-21 ಗೇಮ್‌ಗಳಿದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಚೀನದ ಶಿ ಯುಕಿ ಅವರನ್ನು ಎದುರಿಸಲಿದ್ದಾರೆ.

ಈ ವರ್ಷದ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನ ಫೈನಲಿಗೇರಿದ್ದ  ವಿಶ್ವದ ಎರಡನೇ ರ್‍ಯಾಂಕಿನ ಶಿ ಯುಕಿ ಇನ್ನೊಂದು ಪಂದ್ಯದಲ್ಲಿ ಭಾರತದ ಸಮೀರ್‌ ವರ್ಮ ಅವರೆದುರು 10-21, 21-17, 21-15 ಗೇಮ್‌ಗಳ ಕಠಿನ ಹೋರಾಟದಲ್ಲಿ  ಜಯ ಸಾಧಿಸಿ ಮುನ್ನಡೆದಿದ್ದರು. ಸಮೀರ್‌ ವರ್ಮ ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಕೂಟದ ಪ್ರಶಸ್ತಿ ಜಯಿಸಿದ್ದರು. ಇಲ್ಲಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದರು. 

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ಅಶ್ವಿ‌ನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಅವರು ಅಮೋಘ ರೀತಿಯಲ್ಲಿ ಹೋರಾಡಿ ನಾಲ್ಕನೇ ಶ್ರೇಯಾಂಕದ ಇಂಡೋನೇಶ್ಯದ ಪ್ರವೀಣ್‌ ಜೋರ್ಡಾನ್‌ ಮತ್ತು ಡೆಬಿ ಸುಶಾಂತೊ ಅವರೆದುರು 27-29, 21-16, 12-21 ಗೇಮ್‌ಗಳಿಂದ ವೀರೋಚಿತ ಸೋಲು ಕಂಡರು.

ಟಾಪ್ ನ್ಯೂಸ್

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಬ್ಯಾಟರ್ ಗಳೇ ಯಾಕೆ..? ಭಾರತಕ್ಕೆ ಬೌಲರ್‌ ಗಳೂ ನಾಯಕರಾಗಬಹುದಲ್ಲ!

ಬ್ಯಾಟರ್ ಗಳೇ ಯಾಕೆ..? ಭಾರತಕ್ಕೆ ಬೌಲರ್‌ ಗಳೂ ನಾಯಕರಾಗಬಹುದಲ್ಲ!

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.