
ಟಿ20 ವಿಶ್ವಕಪ್: ಜಸ್‌ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಸಜ್ಜು
Team Udayavani, Sep 12, 2022, 8:05 AM IST

ಹೊಸದಿಲ್ಲಿ: ಕೀ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಮುಂಬರುವ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾಕ್ಕೆ ಮರಳುವುದು ಬಹುತೇಕ ಖಚಿತಪಟ್ಟಿದೆ.
ಬೆಂಗಳೂರಿನ ಎನ್‌ಸಿಎಯಲ್ಲಿರುವ ಇವರಿಬ್ಬರೂ ಫಿಟ್‌ನೆಸ್‌ನಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಮಂಡಳಿಯ ಮೂಲವೊಂದು ತಿಳಿಸಿದೆ.
ಸೆ. 15ರಂದು ಆಯ್ಕೆ ಸಮಿತಿ ಸಭೆ ಸೇರಿ ಭಾರತದ ವಿಶ್ವಕಪ್ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ವೇಗದ ಬೌಲಿಂಗ್ ದೌರ್ಬಲ್ಯ
ರವಿವಾರ ಕೊನೆಗೊಂಡ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ವೇಗದ ಬೌಲರ್‌ಗಳ ಆಯ್ಕೆ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಬುಮ್ರಾ, ಹರ್ಷಲ್ ಪಟೇಲ್ ಗೈರಾದರೂ ಇವರಿಗೆ ಸೂಕ್ತ ಬದಲಿ ಬೌಲರ್‌ಗಳನ್ನು ಆರಿಸಲು ವಿಫಲವಾಗಿತ್ತು. ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ಭಾರತದ ಏಷ್ಯಾ ಕಪ್ ಹಿನ್ನಡೆಗೆ ಇದು ಪ್ರಮುಖ ಕಾರಣ. ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ನಮ್ಮವರ ಬೌಲಿಂಗ್ ತೀಕ್ಷ್ಣತೆಯನ್ನು ಕಳೆದುಕೊಂಡಿತ್ತು.
ಟಿ20 ವಿಶ್ವಕಪ್‌ಗೂ ಮುನ್ನ ನಡೆಯುವ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಸರಣಿಗಳಲ್ಲಿ ಬುಮ್ರಾ ಮತ್ತು ಹರ್ಷಲ್ ಪಟೇಲ್ ಆಡುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಇಬ್ಬರೂ ತಮ್ಮ ಫಾರ್ಮ್ ತೋರ್ಪಡಿಸಬೇಕಿದೆ. ಇವರೊಂದಿಗೆ ಶಮಿ ಕೂಡ ಬಂದರೆ ಆಸೀಸ್ ಟ್ರ್ಯಾಕ್‌ನಲ್ಲಿ ಭಾರತದ ಪೇಸ್ ಬೌಲಿಂಗ್ ಮಿಂಚುವುದು ಖಂಡಿತ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವನಿತಾ ಅಂಡರ್ 19 ವಿಶ್ವಕಪ್: ಕಿವೀಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ರಾಹುಲ್-ಅಥಿಯಾ ಮದುವೆಗೆ ದುಬಾರಿ ಗಿಫ್ಟ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ

ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯ

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ

ಪುರುಷರ ಹಾಕಿ ವಿಶ್ವಕಪ್: ಇಂದು ಸೆಮಿಫೈನಲ್ ಹೋರಾಟ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
