ನೆಟ್ ಅಭ್ಯಾಸಕ್ಕೆ ಸಿದ್ದವಾದ ಜಸ್ಪ್ರೀತ್ ಬುಮ್ರಾ

Team Udayavani, Dec 14, 2019, 4:32 PM IST

ನವದೆಹಲಿ: ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡಕ್ಕೆ ಕೊನೆಗೂ ಶುಭ ಸಮಾಚಾರ ಬಂದಿದ್ದು, ಪುನಶ್ಚೇತನದ ಹಾದಿಯಲ್ಲಿರುವ  ಬಲಗೈ ವೇಗಿ ಜಸ್‌ಪ್ರೀತ್ಬುಮ್ರಾ, ವೆಸ್ಟ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಭಾರತ ತಂಡದ ನೆಟ್‌ ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ.

ಪ್ರಸಕ್ತ ಸಾಲಿನ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿ ವೇಳೆಯಲ್ಲಿ ಸ್ಟ್ರೆಸ್‌ ಫ್ರಾಕ್ಚರ್‌ ಗಾಯದ ಸಮಸ್ಯೆಗೊಳಗಾಗಿ ಬುಮ್ರಾ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆಗೆ ಟೀಮ್‌ ಇಂಡಿಯಾಗೆ ಪುನರಾಗಮನದ ಸೂಚನೆ ನೀಡಿದ್ದಾರೆ.

ಪುನಶ್ಚೇತನದ ಭಾಗವಾಗಿ ಬುಮ್ರಾ ಟೀಮ್‌ ಇಂಡಿಯಾ ನೆಟ್‌ನಲ್ಲಿ ಕಾಣಿಸಿಕೊಳ್ಳು ವೇಳೆ ಅವರ ಪ್ರಗತಿಯನ್ನು ಟೀಮ್‌ ಇಂಡಿಯಾ ಫಿಸಿಸಿಯೋ ನಿತಿನ್‌ ಪಟೇಲ್‌ ಹಾಗೂ ಟ್ರೈನರ್‌ ನಿಕ್‌ ವೆಬ್‌ ನಿಕಟವಾಗಿ ನಿಗಾ ವಹಿಸಲಿದ್ದಾರೆ. ಸದ್ಯ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪುನಶ್ಚೇತನದ ಹಂತದಲ್ಲಿದ್ದಾರೆ .

ವಿಂಡೀಸ್‌ ಸರಣಿಯ ಬ ಳಿಕ ಭಾರತ ಹೊಸ ವರ್ಷದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾಗವಹಿಸಲಿದೆ. ಈ ವೇಳೆಗೆ ಬುಮ್ರಾ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಇದರ ಬದಲಾಗಿ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಬುಮ್ರಾ, ಮ್ಯಾಚ್‌ ಪ್ರಾಕ್ಟಿಸ್‌ ಮಾಡುವ ಇರಾದೆಯಲ್ಲಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ