ಜಾವೆಲಿನ್: ಕಾಂಗ್ ನಿರಾಶೆ
Team Udayavani, Aug 14, 2017, 12:28 PM IST
ಲಂಡನ್; ವಿಶ್ವ ಆ್ಯತ್ಲೆಟಿಕ್ ಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲಿಗೇರಿ ಇತಿಹಾಸ ನಿರ್ಮಿಸಿದ್ದ ಭಾರತದ ದೇವಿಂದರ್ ಸಿಂಗ್ ಕಾಂಗ್ ಅವರು ಅಂತಿಮವಾಗಿ 12ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ನಿರಾಶೆಗೊಳಿಸಿದರು.
ಜಾವೆಲಿನ್ ಸ್ಪರ್ಧೆಯ ಫೈನಲಿಗೇರಿದ ಭಾರತದ ಮೊದಲ ಆ್ಯತ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದ ಕಾಂಗ್ ಫೈನಲ್ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ವಿಫಲರಾದು. ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕಾಂಗ್ ತನ್ನ ಮೂರನೇ ಪ್ರಯತ್ನದಲ್ಲಿ 80.02 ಮೀ. ದೂರ ಎಸೆದರು. ಮೊದಲ ಪ್ರಯತ್ನದಲ್ಲಿ 75.40 ಮೀ. ದೂರ ಎಸೆದಿದ್ದ ಅವರ ದ್ವಿತೀಯ ಪ್ರಯತ್ನ ಫೌಲ್ ಆಗಿತ್ತು. 84.57 ಮೀ. ದೂರ ಎಸೆದಿರುವುದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿತ್ತು.
89.89 ಮೀ. ದೂರ ಎಸೆದ ಜರ್ಮನಿಯ ಜೋಹಾನೆಸ್ ವೆಟರ್ ಚಿನ್ನ ಗೆದ್ದರೆ ಜೆಕ್ ಗಣರಾಜ್ಯ ದವರಾದ ಜಾಕುಬ್ ವಡ್ಲೆಜೆಕ್ ಬೆಳ್ಳಿ ಮತ್ತು ಪೀಟರ್ ಫ್ರಿಡ್ರಿಚ್ ಕಂಚು ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ