ವಿಶ್ವದಾಖಲೆಯೊಂದಿಗೆ ಪ್ಯಾರಾ ಅರ್ಹತೆ ಪಡೆದ ಜಜಾರಿಯಾ
Team Udayavani, Jul 2, 2021, 6:00 AM IST
ಹೊಸದಿಲ್ಲಿ: ಭಾರತದ ಖ್ಯಾತ ಪ್ಯಾರಾಲಿಂಪಿಯನ್ ಜಾವೇಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ತಮ್ಮದೇ ವಿಶ್ವದಾಖಲೆಯನ್ನು ತಿದ್ದಿ ಬರೆದು ಟೋಕಿಯೊ ಒಲಿಂಪಿಕ್ಸ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಇಲ್ಲಿನ “ಜವಾಹರಲಾಲ್ ನೆಹರೂ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ನಲ್ಲಿ 40 ವರ್ಷದ ಜಜಾರಿಯಾ 65.71 ಮೀ. ಸಾಧನೆಯೊಂದಿಗೆ ನೂತನ ವಿಶ್ವ ದಾಖಲೆ ಬರೆದರು. 2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ 63.97 ಮೀ. ಸಾಧನೆಗೈದದ್ದು ಅವರೇ ಸ್ಥಾಪಿಸಿದ ವಿಶ್ವದಾಖಲೆಯಾಗಿತ್ತು. ಅಂದಿನ ಗೇಮ್ಸ್ನ ಎಫ್-46 ವಿಭಾಗದಲ್ಲಿ ಜಜಾರಿಯಾ 2 ಚಿನ್ನದ ಪದಕ ಜಯಿಸಿದ್ದರು. ಪ್ಯಾರಾಲಿಂಪಿಕ್ಸ್ ಕೂಟ ವೊಂದರಲ್ಲಿ 2 ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆ ಅವರದಾಗಿತ್ತು.
ಬಂಗಾರದ ನಿರೀಕ್ಷೆ :
2004ರ ಅಥೇನ್ಸ್ ಪ್ಯಾರಾಲಿಂಪಿಕ್ಸ್ ನಲ್ಲೂ ದೇಶವನ್ನು ಪ್ರತಿನಿಧಿಸಿದ ದೇವೇಂದ್ರ ಜಜಾರಿಯಾ 62.15 ಮೀ. ಎಸೆದು ಚಿನ್ನ ಜಯಿಸಿದ್ದರು. ಅಂದು ಇದು ವಿಶ್ವದಾಖಲೆಯ ಸಾಧನೆ ಆಗಿತ್ತು. ಬಳಿಕ ರಿಯೋದಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಮುರಿದರು. ಟೋಕಿಯೊದಲ್ಲೂ ದೇಶ ಇವರಿಂದ ಬಂಗಾರವನ್ನು ನಿರೀಕ್ಷಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ