ನೀಶಮ್ ಕೋಚ್ ನಿಧನ
Team Udayavani, Jul 19, 2019, 5:31 AM IST
ವೆಲ್ಲಿಂಗ್ಟನ್: ನ್ಯೂಜಿ ಲ್ಯಾಂಡ್ ಕ್ರಿಕೆಟಿಗ ಜಿಮ್ಮಿ ನೀಶಮ್ ಅವರ ಬಾಲ್ಯದ ಕೋಚ್ ಆಗಿದ್ದ ಡೇವಿಡ್ ಜೇಮ್ಸ್ ಗಾರ್ಡನ್ ನಿಧನರಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅವರು ವಿಶ್ವಕಪ್ ಫೈನಲ್ ವೀಕ್ಷಿಸುತ್ತಿರುವಾಗಲೇ ಕೊನೆಯಸಿರೆಳೆದರು ಎಂಬುದಾಗಿ ವರದಿಯಾಗಿದೆ.
ನ್ಯೂಜಿಲ್ಯಾಂಡ್-ಇಂಗ್ಲೆಂಡ್ ವಿಶ್ವಕಪ್ ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಜಿಮ್ಮಿ ನೀಶಮ್ ಸಿಕ್ಸರ್ ಬಾರಿಸಿದರು, ಇನ್ನೇನು ಪಂದ್ಯ ಗೆಲ್ಲುತ್ತದೆ ಎಂದು ಸಂತಸಪಡುತ್ತಿದ್ದ ಜೇಮ್ಸ್ ಗಾರ್ಡನ್, ಇದೇ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಮಗಳು ಲಿಯನಿ ಗಾರ್ಡನ್ ಹೇಳಿದ್ದಾರೆ.
“ನ್ಯೂಜಿಲ್ಯಾಂಡ್ಗೆ ನನ್ನ ಶಿಷ್ಯ ಮೊದಲ ವಿಶ್ವಕಪ್ ಗೆಲ್ಲಿಸಿಕೊಡುತ್ತಾನೆ ಎಂದು ಅಪ್ಪ ಹೇಳುತ್ತಿದ್ದರು. ಸೂಪರ್ ಓವರ್ನ 2ನೇ ಎಸೆತವನ್ನು ನೀಶಮ್ ಸಿಕ್ಸರ್ ಬಾರಿಸಿದ ವೇಳೆ ಜೇಮ್ಸ್ ಗಾರ್ಡನ್ ತೀವ್ರ ಹೃದಯಾಘಾತದಿಂದ ನಿಧರಾದರು’ ಎಂದು ಲಿಯನಿ ತಿಳಿಸಿದರು.