ಇಂದಿನಿಂದ ಜೋಹಾನ್ಸ್ ಬರ್ಗ್ ಟೆಸ್ಟ್: ವಿರಾಟ್ ಪಂದ್ಯದಿಂದ ಔಟ್, ರಾಹುಲ್ ನೂತನ ನಾಯಕ
Team Udayavani, Jan 3, 2022, 1:01 PM IST
ಜೋಹಾನ್ಸ್ ಬರ್ಗ್: ಸರಣಿಯ ಮೊದಲ ಟೆಸ್ಟ್ ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾ ಮತ್ತೊಂದು ಜಯದೊಂದಿಗೆ 2022 ಸಾಲಿನಲ್ಲಿ ಶುಭಾರಂಭ ಮಾಡಲು ಸಜ್ಜಾಗಿದೆ. ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂ ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಸರಣಿ ಜಯದ ಐತಿಹಾಸಿಕ ಸಾಧನೆ ಬರೆಯಲು ಟೀಂ ಇಂಡಿಯಾ ಸಿದ್ದವಾಗಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಕೆ ಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಗಾಯದ ಕಾರಣದಿಂದ ವಿರಾಟ್ ಕೊಹ್ಲಿ ತಂಡಿದಂದ ಹೊರಬಿದ್ದಿದ್ದು, ಅವರ ಬದಲಿಗೆ ಕೆ ಎಲ್ ರಾಹುಲ್ ಈ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ವಿರಾಟ್ ಬದಲಿಗೆ ತಂಡದಲ್ಲಿ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಮತ್ತೆ ಪತ್ರಿಕಾಗೋಷ್ಠಿ ತಪ್ಪಿಸಿಕೊಂಡ ಕೊಹ್ಲಿ!: ಸಮಜಾಯಿಷಿ ನೀಡಿದ ದ್ರಾವಿಡ್
ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಅವರು ಮೊದಲ ಪಂದ್ಯದ ಬಳಿಕ ದಿಢೀರ್ ವಿದಾಯ ಹೇಳಿದ್ದಾರೆ. ಹೀಗಾಗಿ ಡಿಕಾಕ್ ಬದಲಿಗೆ ಕೈಲ್ ವೆರ್ರೆನ್ನೆ ಅವರು ತಂಡ ಸೇರಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇದರೊಂದಿಗೆ ಮುಲ್ಡರ್ ಬದಲಿಗೆ ಒಲಿವಿಯರ್ ತಂಡ ಸೇರಿದ್ದಾರೆ.
ಭಾರತ: ಕೆಎಲ್ ರಾಹುಲ್ (ನಾ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿ.ಕೀ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದ.ಆಫ್ರಿಕಾ: ಡೀನ್ ಎಲ್ಗರ್ (ನಾ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ(ವಿ.ಕೀ), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್‌ಗಿಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೆಸ್ಟ್ ಪಂದ್ಯ: ಬಾಂಗ್ಲಾದೇಶಕ್ಕೆ ವೈಟ್ವಾಶ್ ಮಾಡಿದ ವೆಸ್ಟ್ ಇಂಡೀಸ್
ದೀಪಕ್ ಹೂಡಾ ಭರ್ಜರಿ ಶತಕ : ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ
2019ರ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ನಿವೃತ್ತಿ
ವಿಂಬಲ್ಡನ್ ಟೆನಿಸ್: ಇಗಾ ಸ್ವಿಯಾಟೆಕ್, ಮರಿಯಾ ಸಕ್ಕರಿ ಮುನ್ನಡೆ
ಮಲೇಶ್ಯ ಓಪನ್ ಬ್ಯಾಡ್ಮಿಂಟನ್: ಪ್ರಣಯ್, ಸಾತ್ವಿಕ್-ಚಿರಾಗ್ ಮುನ್ನಡೆ
MUST WATCH
ಹೊಸ ಸೇರ್ಪಡೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್