ವಿಶ್ವ ಟಿ20 ತಂಡ ರಚಿಸಿದ ಜೋನ್ಸ್‌

Team Udayavani, Aug 12, 2019, 5:45 AM IST

ಮೆಲ್ಬರ್ನ್: ಟಿ20 ಕ್ರಿಕೆಟ್ ಎನ್ನುವುದು ಕಳೆದೊಂದು ದಶಕದಿಂದ ಕ್ರೇಜ್‌ ಹುಟ್ಟಿಸಿದ ಕ್ರಿಕೆಟ್. ಅಕಸ್ಮಾತ್‌ ಹಿಂದಿನ ಶತಮಾನದಲ್ಲೇ ಈ ಹೊಡಿಬಡಿ ಕ್ರಿಕೆಟ್ ಆರಂಭಗೊಂಡಿದ್ದರೆ ಇದರಲ್ಲಿ ಯಾರೆಲ್ಲ ಮಿಂಚುತ್ತಿದ್ದರು ಎಂಬ ಕುತೂಹಲ ಸಹಜ. ಇದಕ್ಕೆ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಡೀನ್‌ ಜೋನ್ಸ್‌ ಒಂದು ಹಂತದ ಉತ್ತರ ನೀಡಿದ್ದಾರೆ.

ಕಳೆದ ಹಾಗೂ ಈ ಶತಮಾನದ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಹಾಗೂ ಘಾತಕ ಬೌಲರ್‌ಗಳನ್ನೊಳಗೊಂಡ ವಿಶ್ವ ಟಿ20 ತಂಡವೊಂದನ್ನು ಡೀನ್‌ ಜೋನ್ಸ್‌ ರಚಿಸಿದ್ದಾರೆ. ವಿಚಿತ್ರವೆಂದರೆ, ಈ ತಂಡದಲ್ಲಿ ಏಕೈಕ ಸಮಕಾಲೀನ ಕ್ರಿಕೆಟಿಗನೆಂದರೆ ಮಹೇಂದ್ರ ಸಿಂಗ್‌ ಧೋನಿ. ಉಳಿದವರೆಲ್ಲ ಮಾಜಿಗಳು. ಇವರಲ್ಲಿ ಇಹಲೋಕ ತ್ಯಜಿಸಿದ ಮಾರ್ಟಿನ್‌ ಕ್ರೋವ್‌ ಕೂಡ ಇದ್ದಾರೆ!

ಜೋನ್ಸ್‌ ಟಿ20 ತಂಡ
ಮ್ಯಾಥ್ಯೂ ಹೇಡನ್‌, ಗಾರ್ಡನ್‌ ಗ್ರೀನಿಜ್‌, ವಿವಿಯನ್‌ ರಿಚರ್ಡ್ಸ್‌,ಬ್ರಿಯಾನ್‌ ಲಾರಾ, ಮಾರ್ಟಿನ್‌ ಕ್ರೋವ್‌, ಇಯಾನ್‌ ಬೋಥಂ, ಎಂ. ಎಸ್‌. ಧೋನಿ, ಶೇನ್‌ ವಾರ್ನ್, ವಾಸಿಮ್‌ ಅಕ್ರಮ್‌, ಕಟ್ಲಿರ್ ಆ್ಯಂಬ್ರೋಸ್‌, ಜೋಯೆಲ್ ಗಾರ್ನರ್‌.


ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ