ಜೂನಿಯರ್‌ ವನಿತಾ ಹಾಕಿ ಸರಣಿ: ಭಾರತ-ಆಸ್ಟ್ರೇಲಿಯ 1-1 ಡ್ರಾ

Team Udayavani, Dec 5, 2019, 10:47 PM IST

ಕ್ಯಾನ್‌ಬೆರಾ (ಆಸ್ಟ್ರೇಲಿಯ): ಜೂನಿಯರ್‌ ವನಿತಾ ಹಾಕಿ ತ್ರಿಕೋನ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯದ ಸವಾಲನ್ನು ಮೆಟ್ಟಿ ನಿಂತು 1-1 ಅಂತರದಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಎರಡೂ ತಂಡಗಳು ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿದ್ದವು. ಆದರೆ ಆಸ್ಟ್ರೇಲಿಯ, ಪಂದ್ಯದ 25ನೇ ನಿಮಿಷದಲ್ಲಿ ಶೊನೆಲ್‌ ಕೋರ್ಟ್ನಿ ಬಾರಿಸಿದ ಆಕರ್ಷಕ ಫೀಲ್ಡ್‌ ಗೋಲ್‌ ನೆರವಿನಿಂದ ಮುನ್ನಡೆ ಸಾಧಿಸಿತು. ಇಲ್ಲಿಂದ ಮುಂದೆ ಭಾರತದ ಮೇಲೆ ನಿರಂತರವಾಗಿ ಒತ್ತಡ ಹೇರತೊಡಗಿತು. ಭಾರತದ ಪ್ರಯತ್ನಕ್ಕೆ ಸತತವಾಗಿ ಅಡ್ಡಗಾಲಿಕ್ಕಿ ಮುನ್ನಡೆ ಕಾಯ್ದುಕೊಂಡಿತು.

52ನೇ ನಿಮಿಷದಲ್ಲಿ ಯಶಸ್ಸು
ಕೊನೆಗೂ ಅಂತಿಮ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರ ಪ್ರಯತ್ನಕ್ಕೆ ಫ‌ಲ ಸಿಕ್ಕಿತು. 52ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಒಂದನ್ನು ಗಗನ್‌ದೀಪ್‌ ಕೌರ್‌ ಗೋಲಾಗಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು.ಮೊದಲ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ನ್ಯೂಜಿಲ್ಯಾಂಡಿಗೆ ಸೋಲುಣಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ