ಜೂನಿಯರ್ ವಿಶ್ವಕಪ್ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ
Team Udayavani, Dec 5, 2021, 10:52 PM IST
ಭುವನೇಶ್ವರ: ಜೂನಿಯರ್ ಹಾಕಿ ವಿಶ್ವಕಪ್ ಕೂಟದ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ತಂಡವಾಗಿದ್ದ ಭಾರತಕ್ಕೆ ಈ ಬಾರಿ ಕಂಚಿನ ಪದಕವೂ ದಕ್ಕಲಿಲ್ಲ.
ರವಿವಾರ ನಡೆ ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ಫ್ರಾನ್ಸ್ 3-1 ಗೋಲುಗಳಿಂದ ಭಾರತವನ್ನು ಮಣಿಸಿತು.
ಫ್ರಾನ್ಸ್ ತಂಡದ ನಾಯಕ ಟಿಮೋಥಿ ಕ್ಲೆಮೆಂಟ್ ಹ್ಯಾಟ್ರಿಕ್ ಗೋಲು ಬಾರಿಸಿ ಭಾರತದ ಮೇಲೆ ಸವಾರಿ ಮಾಡಿದರು. ಅವರು 26ನೇ, 34ನೇ ಹಾಗೂ 47ನೇ ನಿಮಿಷದಲ್ಲಿ ಭಾರತದ ಕೋಟೆಗೆ ನುಗ್ಗಿದರು. ಆತಿಥೇಯರ ಏಕೈಕ ಗೋಲು ಸುದೀಪ್ ಚಿರ್ಮಾಕೊ ಅವರಿಂದ 42ನೇ ನಿಮಿಷದಲ್ಲಿ ದಾಖಲಾಯಿತು.
ಆರ್ಜೆಂಟೀನಾ ಚಾಂಪಿಯನ್
ರಾತ್ರಿ ನಡೆದ ಫೈನಲ್ನಲ್ಲಿ 6 ಬಾರಿಯ ಚಾಂಪಿಯನ್ ಜರ್ಮನಿಯನ್ನು 4-2 ಗೋಲುಗಳಿಂದ ಮಣಿಸಿದ ಆರ್ಜೆಂಟೀನಾ ಎರಡನೇ ಸಲ ಚಾಂಪಿಯನ್ ಆಗಿ ಮೂಡಿಬಂತು. ಇದರೊಂದಿಗೆ ಗ್ರೂಪ್ ಹಂತದಲ್ಲಿ ಜರ್ಮನಿ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು.
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್ನಲ್ಲಿ ಘಟನೆ
ಲಾಟರೊ ಡೊಮೆನ್ ಅವರ ಹ್ಯಾಟ್ರಿಕ್ ಗೋಲು ಆರ್ಜೆಂಟೀನಾ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಅವರು 10, 25 ಹಾಗೂ 50ನೇ ನಿಮಿಷದಲ್ಲಿ ಲಭಿಸಿದ ಮೂರೂ ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ