ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌:ಅನೀಷ್‌ ಭನ್ವಾಲಾಗೆ ಬಂಗಾರ

Team Udayavani, Jul 18, 2019, 5:52 AM IST

ಹೊಸದಿಲ್ಲಿ: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಅನೀಷ್‌ ಭನ್ವಾಲಾ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಗುರಿ ಇರಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ 584 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದ ಅನೀಷ್‌, ಫೈನಲ್‌ನಲ್ಲೂ ಇದೇ ಮುನ್ನಡೆ ಕಾಯ್ದುಕೊಂಡರು. ಒಟ್ಟು 29 ಅಂಕ ಗಳಿಸಿ ಬಂಗಾರ ಗೆದ್ದರು. ಇದೇ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆದರ್ಶ್‌ ಸಿಂಗ್‌ 4ನೇ ಸ್ಥಾನ ಪಡೆದರೆ (17 ಅಂಕ), ಆಗ್ನೇಯ ಕೌಶಿಕ್‌ 6ನೇ ಸ್ಥಾನಿಯಾದರು (9 ಅಂಕ). ರಶ್ಯದ ಇಗೋರ್‌ ಇಸ್ಮಕೋವ್‌ ಬೆಳ್ಳಿ (23 ಅಂಕ) ಮತ್ತು ಜರ್ಮನಿಯ ಫ್ಲೋರಿಯನ್‌ ಪೀಟರ್‌ ಕಂಚಿನ ಪದಕ (19 ಅಂಕ) ಗೆದ್ದರು.

ಇದರೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 8 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದಂತಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ