ಐಪಿಎಲ್: ಹೊಸ ತಂಡ ಕೂಡಿಕೊಂಡ ಕನ್ನಡಿಗ ಗೌತಮ್

Team Udayavani, Nov 14, 2019, 4:53 PM IST

ಬೆಂಗಳೂರು: ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಹೊಸ ತಂಡವನ್ನು ಕೂಡಿಕೊಳ್ಳಲಿದ್ದರೆ. ಗೌತಮ್ ರನ್ನು 6.2 ಕೋಟಿ ಕೊಟ್ಟು ಖರೀದಿಸಿದ್ದ ರಾಜಸ್ಥಾನ ರಾಯಲ್ಸ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮಾರಾಟ ಮಾಡಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನಲ್ಲಿದ್ದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆ ಮಾರಾಟ ಮಾಡಿದೆ. ಹಾಗಾಗಿ ಹೊಸ ಸ್ಪಿನ್ನರ್ ನ್ನು ಹುಡುಕುತ್ತಿರುವ ಪ್ರೀತಿ ಬಳಗ ಗೌತಮ್ ರನ್ನು ಸೆಳೆದಿದೆ.

ರಾಜಸ್ಥಾನ ತಂಡದ ಅಜಿಂಕ್ಯಾ ರಹಾನೆ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗುವ ಸಾಧ್ಯತೆಯಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ