ರೋಹಿತ್, ಕೊಹ್ಲಿ ಸಾಲಿಗೆ ಸೇರಿದ ಕೆ.ಎಲ್.ರಾಹುಲ್
Team Udayavani, Feb 1, 2020, 4:41 PM IST
ವೆಲ್ಲಿಂಗ್ಟನ್: ಕಳೆದೊಂದು ವರ್ಷದಿಂದ ಶ್ರೇಷ್ಠ ಫಾರ್ಮ್ ಪ್ರದರ್ಶಿಸಿಕೊಂಡು ಬರುತ್ತಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದ ವೇಳೆ ಹೊಸ ದಾಖಲೆ ಬರೆದಿದ್ದಾರೆ.
ಕೆ.ಎಲ್.ರಾಹುಲ್ ಒಟ್ಟಾರೆ ಟಿ20 ಕ್ರಿಕೆಟ್ ನಲ್ಲಿ 4 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿ ಕೆ.ಎಲ್.ರಾಹುಲ್ ಅವರಿಂದ ಇಂತಹದ್ದೊಂದು ಮೈಲುಗಲ್ಲು ನಿರ್ಮಾಣವಾಗಿದೆ. ಈ ಸಾಧನೆ ಮೂಲಕ ನಾಯಕ ವಿರಾಟ್ ಕೊಹ್ಲಿ, ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮ ಜತೆಗಿನ ಕ್ಲಬ್ ಸೇರಿದ್ದಾರೆ.
ವೆಲ್ಲಿಂಗ್ಟನ್ ಪಂದ್ಯದಲ್ಲಿ ರಾಹುಲ್ 39 ರನ್ ಗಳಿಸಿದ್ದರು. ನಂತರ ಸೂಪರ್ ಓವರ್ ನಲ್ಲಿ ಮೂರು ಎಸೆತಗಳಿಂದ ಉಪಯುಕ್ತ 10 ರನ್ ಗಳಸಿದ್ದರು.
ರೋಚಕ ಸೂಪರ್ ಓವರ್ ನಲ್ಲಿ ವೆಲ್ಲಿಂಗ್ಟನ್ ಪಂದ್ಯವನ್ನು ಗೆದ್ದ ಭಾರತ ಸರಣಿಯಲ್ಲಿ 4-0 ಅಂತರದಿಂದ ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ