ಮೊದಲ ಟಿ ಟ್ವೆಂಟಿ:  ರಾಹುಲ್‌, ರಿಷಭ್ ಪಂತ್‌ ಮೇಲೆ ಭಾರಿ ನಿರೀಕ್ಷೆ

Team Udayavani, Dec 6, 2019, 3:20 PM IST

ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯ ಇಂದು ಉಪ್ಪಳ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಸಶಕ್ತ ಹಾಗೂ ಪೂರ್ಣ ಸಾಮರ್ಥ್ಯದ ತಂಡ ವೊಂದನ್ನು ರಚಿಸುವ ಗುರಿಯೊಂದಿಗೆ ಭಾರತ ತಂಡ ಈ ಸರಣಿ ಆರಂಭಿಸುತ್ತಿದೆ.

ಹೀಗಾಗಿ ತಂಡ ಪ್ರದರ್ಶನದೊಂದಿಗೆ ಆಟಗಾರರ ವೈಯಕ್ತಿಕ ಸಾಮರ್ಥ್ಯವನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಈ ಸಾಲಿನಲ್ಲಿರುವ ಇಬ್ಬರು ಆಟಗಾರರೆಂದರೆ ಕನ್ನಡಿಗ ಕೆ.ಎಲ್‌. ರಾಹುಲ್‌ ಮತ್ತು ವಿಕೆಟ್ ಕೀಪರ್ ರಿಷಭ್‌ ಪಂತ್‌.

ಎಡಗೈ ಆರಂಭಕಾರ ಶಿಖರ್‌ ಗಾಯಾಳಾಗಿ ಹೊರಗುಳಿದ ಕಾರಣ ರಾಹುಲ್‌ಗೆ ಇನ್ನಿಂಗ್ಸ್‌ ಆರಂಭಿಸುವ ಜವಾಬ್ದಾರಿ ಲಭಿಸುವುದು ಬಹುತೇಕ ಖಚಿತ. ಟಿ 20ಯಲ್ಲಿ ಉತ್ತಮ ದಾಖಲೆ ಹೊಂದಿರುವ ರಾಹುಲ್‌, ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕೂಟದಲ್ಲಿ ಕರ್ನಾಟಕವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 31 ಟಿ 20 ಪಂದ್ಯಗಳಿಂದ 974 ರನ್‌ ಪೇರಿಸಿದ ಹೆಗ್ಗಳಿಕೆ ರಾಹುಲ್‌ ಪಾಲಿಗಿದೆ. ಇನ್ನು 26 ರನ್ ಗಳಿಸಿದರೆ ರಾಹುಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಲಿದ್ದಾರೆ.

ಟೀಮ್‌ ಇಂಡಿಯಾದಲ್ಲಿದ್ದರೂ ರಾಹುಲ್‌ಗೆ ಮಧ್ಯಮ ಕ್ರಮಾಂಕ ಅಷ್ಟಾಗಿ ಹೊಂದಿಕೊಳ್ಳುತ್ತಿರಲಿಲ್ಲ. ಅಲ್ಲದೇ ಈಗ ಶ್ರೇಯಸ್‌ ಅಯ್ಯರ್‌ 4ನೇ ಕ್ರಮಾಂಕಕ್ಕೆ ಲಗ್ಗೆ ಇರಿಸಿದ್ದರಿಂದ ರಾಹುಲ್‌ಗೆ ಈ ಸ್ಥಾನವೂ ಕಳೆದು ಹೋಗಿದೆ. ಉಳಿದಿರುವ ಒಂದೇ ಮಾರ್ಗವೆಂದರೆ ಧವನ್‌ ಜಾಗವನ್ನು ಸಮರ್ಥ ರೀತಿಯಲ್ಲಿ ತುಂಬಿ ಸುವುದು.

ಪಂತ್‌ ಇನ್ನೂ ನಿರೀಕ್ಷಿತ ಮಟ್ಟಕ್ಕೆ ಏರಿಲ್ಲ. ಕೀಪಿಂಗ್‌ ಹಾಗೂ ಬ್ಯಾಟಿಂಗ್‌ಗ ಳೆರಡರಲ್ಲೂ “ಸಿಲ್ಲಿ’ಯಾಗಿ ವರ್ತಿಸಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಪಂತ್ ಪದೇ ಪದೇ ಎಡವುತ್ತಿದ್ದಾರೆ. ಒಂದು ವೇಳೆ ಈ ಸರಣಿಯಲ್ಲೂ ಪಂತ್ ವಿಫಲವಾದರೆ ಬೆಂಚ್ ಕಾಯುತ್ತಿರುವ ಸಂಜು ಸ್ಯಾಮ್ಸನ್ ಅವರ ಸ್ಥಾನಕ್ಕೆ ಬರುವುದು ಖಚಿತ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ