ಕಬಡ್ಡಿ: ಭಾರತಕ್ಕೆ ಅವಳಿ ಬಂಗಾರ

Team Udayavani, Dec 10, 2019, 6:15 AM IST

ಸೌತ್‌ ಏಶ್ಯನ್‌ ಗೇಮ್ಸ್‌ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು
ಕಾಠ್ಮಂಡು (ನೇಪಾಲ), ಡಿ. 9: ಸೌತ್‌ ಏಶ್ಯನ್‌ ಗೇಮ್ಸ್‌ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಪುರುಷರ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 51-18 ಅಂಕಗಳಿಂದ ಮಣಿಸಿತು. ವನಿತೆಯರು ಆತಿಥೇಯ ನೇಪಾಲವನ್ನು 50-13ರಿಂದ ಹಿಮ್ಮೆಟ್ಟಿಸಿದರು.

ಪುರುಷರ ವಿಭಾಗದಲ್ಲಿ ನಿತೇಶ್‌ ಕುಮಾರ್‌, ವಿಶಾಲ್‌ ಭಾರದ್ವಾಜ್‌, ಸುನೀಲ್‌ ಕುಮಾರ್‌, ಪರ್ವೇಶ್‌ ಭೈನ್ಸ್‌ ವಾಲ್‌, ನವೀನ್‌ ಕುಮಾರ್‌, ಪವನ್‌ ಶೆಹ್ರಾವತ್‌ ಮತ್ತು ದೀಪಕ್‌ ಹೂಡಾ ಅಮೋಘ ಪ್ರದರ್ಶನವಿತ್ತರು. ವನಿತಾ ವಿಭಾಗದಲ್ಲಿ ರಿತು ಕುಮಾರಿ, ನಿಶಾ, ಪುಷ್ಪಾ, ಸಾಕ್ಷಿ ಕುಮಾರ್‌, ಪ್ರಿಯಾಂಕಾ, ರಿತು ನೇಗಿ, ದೀಪಿಕಾ ಹೆನ್ರಿ ಜೋಸೆಫ್ ನೇಪಾಲಕ್ಕೆ ತಲೆಯೆತ್ತಿ ನಿಲ್ಲಲು ಆಸ್ಪದವನ್ನೇ ನೀಡಲಿಲ್ಲ.

ವನಿತಾ ಫ‌ುಟ್‌ಬಾಲ್‌; ಭಾರತಕ್ಕೆ ಹ್ಯಾಟ್ರಿಕ್‌ ಚಿನ್ನ
ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತದ ವನಿತಾ ಫ‌ುಟ್‌ಬಾಲ್‌ ತಂಡ ಹ್ಯಾಟ್ರಿಕ್‌ ಚಿನ್ನದ ಸಾಧನೆಗೈದಿದೆ. ಸೋಮವಾರದ ಫೈನಲ್‌ನಲ್ಲಿ ಭಾರತ ತಂಡ 2-0 ಗೋಲುಗಳಿಂದ ಆತಿಥೇಯ ನೇಪಾಲವನ್ನು ಮಣಿಸಿತು.

29ರ ಹರೆಯದ ಸ್ಟ್ರೈಕರ್‌ ಬಾಲಾ ದೇವಿ ಭಾರತದ ತಾರಾ ಆಟಗಾರ್ತಿಯಾಗಿ ಗೋಚರಿಸಿದರು. ಪಂದ್ಯದ ಎರಡೂ ಅವಧಿಗಳಲ್ಲಿ ಒಂದೊಂದು ಗೋಲು ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿಬಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ