
ರಿಷಭ್ ಪಂತ್ ಕೆನ್ನೆಗೆ ಹೊಡೆಯಲು ಕಾಯುತ್ತಿದ್ದಾರೆ ಕಪಿಲ್ ದೇವ್!
Team Udayavani, Feb 9, 2023, 12:30 PM IST

ನವದೆಹಲಿ: ಅಪಘಾತದಿಂದ ತೀವ್ರ ಗಾಯಗೊಂಡು ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಭ್ ಪಂತ್ ಕೆನ್ನೆಗೆ ಹೊಡೆಯಲು ಮಾಜಿ ನಾಯಕ ಕಪಿಲ್ ದೇವ್ ಕಾದು ಕುಳಿತ್ತಿದ್ದಾರೆ! ಕಾರಣವೇನೆಂದು ಕೇಳಿ. ರಿಷಭ್ ಪಂತ್ ಬೇಜವಾಬ್ದಾರಿಯಿಂದ ಕಾರು ಓಡಿಸಿಕೊಂಡು ಹೋಗಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಇದರಿಂದ ಭಾರತ ಟೆಸ್ಟ್ ತಂಡ ಸಮತೋಲನವೇ ತಪ್ಪಿಹೋಗಿದೆ. ಅದು ಕಪಿಲ್‌ಗೆ ಸಿಟ್ಟು ತರಿಸಿದೆ.
“ಮೊದಲು ರಿಷಭ್‌ಗೆ ನನ್ನ ಆಶೀರ್ವಾದ ನೀಡುತ್ತೇನೆ. ಆಮೇಲೆ ಬಲವಾಗಿ ಕೆನ್ನೆಗೆ ಹೊಡೆಯುತ್ತೇನೆ. ಒಮ್ಮೆ ಗಾಯಗಳಿಂದ ರಿಷಭ್ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿದ್ದೇನೆ. ಅಪ್ಪಅಮ್ಮನಿಗೆ ಹೇಗೆ ಮಕ್ಕಳು ತಪ್ಪು ಮಾಡಿದಾಗ ಹೊಡೆಯುವ ಅಧಿಕಾರವಿರುತ್ತದೋ, ಅದನ್ನೇ ನಾನೂ ಮಾಡುತ್ತೇನೆ…’ ಹೀಗೆಂದು ಕಪಿಲ್ ಹೇಳಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ಜಾಮೀನು ಮಂಜೂರು
ಕಪಿಲ್ ಮಾತಿನಲ್ಲಿ ತಪ್ಪು ಮಾಡುವ ಮಕ್ಕಳನ್ನು ತಿದ್ದುವ ಒಂದು ಪ್ರೀತಿ, ಕಾಳಜಿ, ಆಕ್ರೋಶವಿತ್ತು. ಅದೂ ಸಹಜವೂ ಹೌದು. ಕಳೆದ ಡಿ.30ರಂದು ದೆಹಲಿಯಿಂದ ಉತ್ತರಾಖಂಡದ ರೂರ್ಕೆಲಕ್ಕೆ ತಾವೇ ಕಾರು ಓಡಿಸಿಕೊಂಡು ರಿಷಭ್ ಹೊರಟಿದ್ದರು. ಮುಂಜಾನೆ ಹೊತ್ತು ರಸ್ತೆ ವಿಭಜಕಕ್ಕೆ ಗುದ್ದಿದ ಕಾರಿಗೆ ಬೆಂಕಿ ಹತ್ತಿಕೊಂಡಿತು. ಆ ಹಂತದಲ್ಲಿ ಕಾರಿನ ಕಿಟಕಿ ಒಡೆದು ಬಸ್ ಚಾಲಕರೊಬ್ಬರು ರಿಷಭ್ ರನ್ನು ಕಾಪಾಡಿದ್ದರು. ಅವರು ಬದುಕುಳಿದಿದ್ದೇ ಒಂದು ಆಶ್ಚರ್ಯ. ಬೆನ್ನಿಗೆ, ಕಾಲಿಗೆ, ಮಂಡಿಗೆ ತೀವ್ರ ಗಾಯ ಮಾಡಿಕೊಂಡಿದ್ದಾರೆ. ಯಾವಾಗ ಅವರು ಮರಳಿ ಕಣಕ್ಕಿಳಿಯುತ್ತಾರೆ ಎನ್ನುವುದು ಖಚಿತವಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?