ಕಳಪೆ ಅಂಪೈರಿಂಗ್‌ಗೆ ಸೋತ ಕರ್ನಾಟಕ


Team Udayavani, Jan 29, 2019, 12:30 AM IST

ban29011912medn.jpg

ಬೆಂಗಳೂರು: ಈ ಬಾರಿ ರಣಜಿ ಫೈನಲ್‌ಗೇರುವ ಉತ್ಸಾಹ ಮತ್ತು ಎಲ್ಲ ಅರ್ಹತೆ ಹೊಂದಿದ್ದ ಆತಿಥೇಯ ಕರ್ನಾಟಕ ಭಾರೀ ನಿರಾಸೆಗೊಳಗಾಗಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಸೌರಾಷ್ಟ್ರ ಈ ಅದೃಷ್ಟ ಸಂಪಾದಿಸಿದೆ. ಔಟಾಗಿದ್ದರೂ ಕ್ರೀಸ್‌ನಲ್ಲೇ ಉಳಿದುಕೊಂಡ, ಕ್ರೀಡಾಸ್ಫೂರ್ತಿ ಮೆರೆಯದ ಎದುರಾಳಿ ತಂಡದ ಆಟಗಾರ ಚೇತೇಶ್ವರ್‌ ಪೂಜಾರ ಬಗ್ಗೆ ರಾಜ್ಯದ ಪ್ರೇಕ್ಷಕರಲ್ಲಿ ತೀವ್ರ ಬೇಸರ ಮನೆ ಮಾಡಿದೆ. ಅವರನ್ನು “ಚೀಟೇಶ್ವರ ಪೂಜಾರ’ ಎಂದು ಅಭಿಮಾನಿಗಳು ಜರಿದಿದ್ದಾರೆ!

ಗೆಲ್ಲಲು ಸೌರಾಷ್ಟ್ರಕ್ಕೆ 279 ರನ್‌ ಗುರಿ ಸಿಕ್ಕಿತ್ತು. ರವಿವಾರವೇ 3 ವಿಕೆಟ್‌ ನಷ್ಟಕ್ಕೆ 224 ರನ್‌ ಗಳಿಸಿ ಗೆಲುವಿನ ಸಮೀಪ ತಲುಪಿತ್ತು. ಸೋಮವಾರ ಇನ್ನೆರಡು ವಿಕೆಟ್‌ ಕಳೆದುಕೊಂಡರೂ ಸೌರಾಷ್ಟ್ರಕ್ಕೆ ಅದರಿಂದ ಯಾವ ತೊಂದರೆಯೂ ಆಗಲಿಲ್ಲ. 5 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿದ ಅದು ಭರ್ಜರಿ ಜಯ ಸಾಧಿಸಿತು. ಸೌರಾಷ್ಟ್ರ  ಫೆ. 3ರಿಂದ 7ರ ವರೆಗೆ ಜೈಪುರದಲ್ಲಿ ನಡೆಯುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ವಿದರ್ಭವನ್ನು ಎದುರಿಸಲಿದೆ.ರವಿವಾರ ಅಜೇಯರಾಗಿ ಉಳಿದಿದ್ದ ಶೆಲ್ಡನ್‌ ಜಾಕ್ಸನ್‌, ಸೋಮವಾರ ಸರಿಯಾಗಿ 100 ರನ್‌ ಬಾರಿಸಿ ಔಟಾದರು. ಅವರ ಈ 215 ಎಸೆತಗಳ ಅಮೋಘ ಇನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು. ಮತ್ತೂಂದು ಕಡೆ ಚೇತೇಶ್ವರ ಪೂಜಾರ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿದರು. 2ನೇ ಇನಿಂಗ್ಸ್‌ನಲ್ಲಿ ಒಮ್ಮೆ ಜೀವದಾನ ಪಡೆದರೂ, ಉಳಿದಂತೆ ಅವರು ಯಾವುದೇ ತಪ್ಪು ಮಾಡಲಿಲ್ಲ. 266 ಎಸೆತ ನಿಭಾಯಿಸಿದ ಅವರು 131 ರನ್‌ ಬಾರಿಸಿ ಅಜೇಯರಾಗಿ ಉಳಿದರು.

ಸೋಮವಾರ ಸೌರಾಷ್ಟ್ರಕ್ಕೆ ಬೇಕಿದ್ದದ್ದು ಕೇವಲ 55 ರನ್‌. ಇದನ್ನು ಸಾಧಿಸಲು 17.4 ಓವರ್‌ ಬೇಕಾಯಿತು. ಕರ್ನಾಟಕದ ಪರ ವಿನಯ್‌ ಕುಮಾರ್‌ 75 ರನ್‌ ನೀಡಿ 3 ವಿಕೆಟ್‌ ಪಡೆದರು.

ಪೂಜಾರ ಬಗ್ಗೆ ಅಭಿಮಾನಿಗಳ ಬೇಸರ
ಚೇತೇಶ್ವರ್‌ ಪೂಜಾರ ಎರಡೂ ಇನಿಂಗ್ಸ್‌ಗಳಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದರು. ಆದರೆ ಎರಡೂ ಬಾರಿ ಅಂಪಾಯರ್‌ ಅವರಿಗೆ ಜೀವದಾನ ನೀಡಿದರು. ಈ ಕಳಪೆ ಅಂಪಾಯರಿಂಗ್‌ ಕರ್ನಾಟಕದ ಸೋಲಿನಲ್ಲಿ ಮುಕ್ತಾಯವಾಯಿತು. ಇದಕ್ಕೆ ಸರಿಯಾಗಿ ಪೂಜಾರ ಕೂಡ ಕ್ರೀಡಾಸ್ಫೂರ್ತಿ ತೋರಲಿಲ್ಲ. ಔಟಾಗಿದ್ದು ಗೊತ್ತಿದ್ದರೂ, ಟೀವಿ ರಿಪ್ಲೇಗಳು ಇದನ್ನು ಸಾಬೀತುಪಡಿಸಿದರೂ ಎರಡೂ ಬಾರಿ ಅವರು ಕ್ರೀಸ್‌ನಿಂದ ಹೊರ ನಡೆಯಲಿಲ್ಲ. ಬದಲಿಗೆ ಅಂಪಾಯರ್‌ ತೀರ್ಪನ್ನೇ ಅನುಸರಿಸಿದರು. ಇದು ರಾಜ್ಯದ ಕ್ರಿಕೆಟ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು.

ಅಂಪಾಯರ್‌ ಖಲೀದ್‌ ಸಯ್ಯದ್‌ಗೆ ಹಿಂಬಡ್ತಿ?
ಚೇತೇಶ್ವರ್‌ ಪೂಜಾರ 2ನೇ ಇನಿಂಗ್ಸ್‌ನಲ್ಲಿ 32 ರನ್‌ ಗಳಿಸಿದ್ದಾಗ, ವಿನಯ್‌ ಕುಮಾರ್‌ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿದ್ದು ಸ್ಪಷ್ಟವಾಗಿತ್ತು. ಆದರೂ ನಾಟೌಟ್‌ ನೀಡಿದ ಅಂಪಾರ್‌ ಖಲೀದ್‌ ಸಯ್ಯದ್‌ ಋಣಾತ್ಮಕ ಅಂಕ ಪಡೆಯಲಿದ್ದಾರೆ. ಮುಂದಿನ ಋತುವಿನಲ್ಲಿ ಕೆಳದರ್ಜೆಗೆ ಇಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಸಯ್ಯದ್‌ ತಪ್ಪು ತೀರ್ಪಿನಿಂದಾಗಿ ಕರ್ನಾಟಕ ತಂಡ ಫೈನಲ್‌ಗೇರುವ ಅಮೂಲ್ಯ ಅವಕಾಶ ಕಳೆದುಕೊಂಡದ್ದು ಇಲ್ಲಿ ಗಣನೆಗೆ ಬರಲಿದೆ.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-275 ಮತ್ತು 239 (ಶ್ರೇಯಸ್‌ ಗೋಪಾಲ್‌ 61, ಮಾಯಾಂಕ್‌ ಅಗರ್ವಾಲ್‌ 46, ಧರ್ಮೇಂದ್ರ ಜಡೇಜ 48ಕ್ಕೆ 5, ಜೈದೇವ್‌ ಉನಾದ್ಕತ್‌ 35ಕ್ಕೆ 3). ಸೌರಾಷ್ಟ್ರ-236 ಮತ್ತು 5 ವಿಕೆಟಿಗೆ 279 (ಚೇತೇಶ್ವರ್‌ ಪೂಜಾರ ಔಟಾಗದೆ 131, ಶೆಲ್ಡನ್‌ ಜಾಕ್ಸನ್‌ 100, ವಿನಯ್‌ ಕುಮಾರ್‌ 75ಕ್ಕೆ 3).

ಟಾಪ್ ನ್ಯೂಸ್

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

32tmc

ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ: ಕಿರಣ್ ಕಾಂದೋಳಕರ್

ದುರಂತದಲ್ಲಿ ಬದುಕುಳಿದಿರೋ ಕ್ಯಾ.ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ

ದುರಂತದಲ್ಲಿ ಬದುಕುಳಿದಿರೋ ಕ್ಯಾ.ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ

ಗೋವಾ ವಿಧಾನಸಭಾ ಚುನಾವಣೆ 2022: ಡಿ.10ರಿಂದ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

ಗೋವಾ ವಿಧಾನಸಭಾ ಚುನಾವಣೆ 2022: ಡಿ.10ರಿಂದ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

31cmsawanth

ಲೈಂಗಿಕ ಕಿರುಕುಳದ ದೂರಿನಲ್ಲಿ ಸತ್ಯಾಂಶವಿದ್ದರೆ, ಆ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ವಿರುದ್ಧ ಎಡವಿದ ಕರ್ನಾಟಕ ತಂಡ

ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ವಿರುದ್ಧ ಎಡವಿದ ಕರ್ನಾಟಕ ತಂಡ

ಯುವ ಆಟಗಾರನಿಗೆ ಟೆಸ್ಟ್ ನಾಯಕತ್ವ ನೀಡಲು ಮುಂದಾದ ಬಿಸಿಸಿಐ

ಯುವ ಆಟಗಾರನಿಗೆ ಟೆಸ್ಟ್ ನಾಯಕತ್ವ ನೀಡಲು ಮುಂದಾದ ಬಿಸಿಸಿಐ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ

ಏಕದಿನ ನಾಯಕತ್ವ , ಟೆಸ್ಟ್‌ ಉಪನಾಯಕತ್ವ ರೋಹಿತ್‌ ಪಾಲು

ಆ್ಯಶಸ್‌: ಗಬ್ಟಾದಲ್ಲಿ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್‌

ಆ್ಯಶಸ್‌: ಗಬ್ಟಾದಲ್ಲಿ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್‌

MUST WATCH

udayavani youtube

ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

ಹೊಸ ಸೇರ್ಪಡೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ಚಳಿಗಾಲ ಅಧಿವೇಶನ ಅಚ್ಚುಕಟ್ಟಾಗಿ ನಿರ್ವಹಿಸಿ

ಚಳಿಗಾಲ ಅಧಿವೇಶನ ಅಚ್ಚುಕಟ್ಟಾಗಿ ನಿರ್ವಹಿಸಿ

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

32tmc

ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ: ಕಿರಣ್ ಕಾಂದೋಳಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.