ಅಂಧರ ಮೊದಲ ಮಹಿಳಾ ರಾಷ್ಟ್ರೀಯ ಕ್ರಿಕೆಟಿಗೆ ಕರ್ನಾಟಕ ಸಜ್ಜು

Team Udayavani, Dec 13, 2019, 11:21 PM IST

ಬೆಂಗಳೂರು: “ಹೊಸದಿಲ್ಲಿಯಲ್ಲಿ ನಡೆ ಯಲಿರುವ ಅಂಧರ ಮೊದಲ ಮಹಿಳಾ ರಾಷ್ಟ್ರೀಯ ಕ್ರಿಕೆಟ್‌ ಕೂಟಕ್ಕೆ ಕರ್ನಾಟಕ ತಂಡ ಸಂಪೂರ್ಣ ತಯಾರಿ ನಡೆಸಿದೆ’ ಎಂದು ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಮಹಾಂತೇಶ್‌ ಹೇಳಿದ್ದಾರೆ.

“ಈ ಕೂಟವನ್ನು ಕರ್ನಾಟಕ ಅಂಧರ ಕ್ರಿಕೆಟ್‌ ಸಂಸ್ಥೆ (ಕೆಸಿಎಬಿ) ಆಯೋಜಿಸುತ್ತಿದೆ. ಡಿ. 16ರಿಂದ 19ರ ತನಕ ಪಂದ್ಯಾವಳಿ ನಡೆಯಲಿದೆ. ಡಿಡಿಎ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೈನಲ್‌ ನಡೆಯಲಿದೆ. ಕೂಟದಲ್ಲಿ ರಾಜ್ಯ ತಂಡ ಸೇರಿದಂತೆ ಆತಿಥೇಯ ದಿಲ್ಲಿ, ಒಡಿಶಾ, ಜಾರ್ಖಂಡ್‌, ಮಹಾರಾಷ್ಟ್ರ, ಕೇರಳ ಮತ್ತು ಬಂಗಾಲ ತಂಡಗಳು ಪಾಲ್ಗೊಳ್ಳುತ್ತಿವೆ’ ಎಂದು ಮಹಾಂತೇಶ್‌ ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರೋಜರ್‌ ಬಿನ್ನಿ, ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಮಮತಾ ಉಪಸ್ಥಿತರಿದ್ದರು.

ಶಿಬಿರಗಳ ಮೂಲಕ ಆಯ್ಕೆ
“ರಾಜ್ಯ ತಂಡದ ಆಯ್ಕೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಒಟ್ಟಾರೆ 6 ಶಿಬಿರಗಳನ್ನು ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 85 ಅಂಧ ಆಟಗಾರ್ತಿಯರು ಭಾಗವ ಹಿಸಿದ್ದರು. ಸಂಭಾವ್ಯ 28 ಆಟಗಾರ್ತಿಯರನ್ನು ಆರಿಸಿದ ಬಳಿಕ 14 ಮಂದಿಯನ್ನು ಅಂತಿಮ ಗೊಳಿಸ ಲಾಯಿತು’ ಎಂದು ಮಹಾಂತೇಶ್‌ ವಿವರಿಸಿದರು.

ಕರ್ನಾಟಕ ತಂಡ
ಸುನಿತಾ ಡಿ. (ನಾಯಕಿ), ಬಿ. ಜಯಲಕ್ಷ್ಮೀ, ಎನ್‌.ಆರ್‌. ಕಾವ್ಯಾ, ದೀಪಿಕಾ, ವಿ. ನೇತ್ರಾವತಿ, ರೇಣುಕಾ ರಜಪೂತ್‌, ಅನಿತಾ, ಜಿ.ಪಿ. ಶಿಲ್ಪಾ, ಭೂಮಿಕಾ ಎಸ್‌. ವಾಲ್ಮೀಕಿ, ರಾಜೇಶ್ವರಿ ಸರ್ದಾರ್‌, ಆಶಾ ದಹಾಲ್‌, ಯು. ವರ್ಷ, ವಿಜಯಲಕ್ಷ್ಮೀ, ಸಿ. ಕನಿತಾ.

ಫೈನಲ್‌ ಪಂದ್ಯ ವೀಕ್ಷಿಸುವೆ: ಬಿನ್ನಿ
“ಟೀವಿಯಲ್ಲಿ ನಾನು ಅಂಧರ ಕ್ರಿಕೆಟ್‌ ಪಂದ್ಯಗಳನ್ನು ನೋಡಿದ್ದೆ. ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಆದರೆ ದಿಲ್ಲಿಗೆ ತೆರಳಿ ಫೈನಲ್‌ ಪಂದ್ಯವನ್ನು ವೀಕ್ಷಿಸಬೇಕೆಂದು ನಿರ್ಧರಿಸಿದ್ದೇನೆ’ ಎಂದು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರೋಜರ್‌ ಬಿನ್ನಿ ತಿಳಿಸಿದ್ದಾರೆ.

“ಅಂಧರ ಕ್ರಿಕೆಟನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪಂದ್ಯವನ್ನು ಸ್ಪರ್ಧೆ ಎಂದು ತೆಗೆದುಕೊಳ್ಳಬೇಡಿ. ಖುಷಿಯಿಂದಲೇ ಆಡಿ’ ಎಂದು ರಾಜ್ಯ ತಂಡದ ಆಟಗಾರ್ತಿಯರಿಗೆ ಬಿನ್ನಿ ಶುಭ ಹಾರೈಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ