ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ; ಪ್ರಮುಖ ರೂವಾರಿ ಭವೇಶ್ ಬಂಧನ
Team Udayavani, Oct 2, 2019, 12:46 PM IST
ಬೆಂಗಳೂರು: ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ನ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಪ್ರಮುಖ ರೂವಾರಿ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ರೂವಾರಿ ದೆಹಲಿ ಮೂಲದ ಖ್ಯಾತ ಡ್ರಮ್ಮರ್ ಭವೇಶ್ ಬಾಪ್ನಾ ಮತ್ತು ಸನ್ಯಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಭಾವೇಶ್ ಬಾಪ್ನಾನನ್ನು ಬಂಧಿಸುವಲ್ಲಿ ಸಿಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಕೆಫೆಯೊಂದರಲ್ಲಿ ಈ ಬಗ್ಗೆ ಡೀಲ್ ನಡೆದ ಬಗ್ಗೆ ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು. ಭವೇಶ್ ಬಾಪ್ನಾನನ್ನು ಬಂಧಿಸಿದ್ದು, ಮತ್ತೊಬ್ಬ ಬುಕ್ಕಿ ಸನ್ಮಾಮ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಒಂದು ಓವರ್ ಗೆ ಹತ್ತು ರನ್ ನೀಡುವಂತೆ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದರು. ಆದರೆ ಬುಕ್ಕಿಯ ಆಫರ್ ತಿರಸ್ಕರಿಸಿರುವುದಾಗಿ ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ದೂರಿನಲ್ಲಿ ವಿವರಿಸಿದ್ದಾರೆ.