ಪ್ರಶಸ್ತಿ ಉಳಿಸಿಕೊಂಡ ಪ್ಲಿಸ್ಕೋವಾ
Team Udayavani, Jan 13, 2020, 6:20 AM IST
ಬ್ರಿಸ್ಬೇನ್: ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ “ಬ್ರಿಸ್ಬೇನ್ ಇಂಟರ್ನ್ಯಾಶನಲ್’ ಟೆನಿಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರ ನಡೆದ ಜಿದ್ದಾಜಿದ್ದಿ ಫೈನಲ್ನಲ್ಲಿ ಅವರು ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 6-4, 4-6, 7-5 ಅಂತರದ ಗೆಲುವು ಒಲಿಸಿಕೊಂಡರು.
ಇದು ಪ್ಲಿಸ್ಕೋವಾಗೆ ಒಲಿದ 3ನೇ ಬ್ರಿಸ್ಬೇನ್ ಪ್ರಶಸ್ತಿ. ಇದರೊಂದಿಗೆ ಇಲ್ಲಿ ಅತೀ ಹೆಚ್ಚು ಸಲ ಚಾಂಪಿಯನ್ ಎನಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾದರು. ಅವರಿಲ್ಲಿ 2017ರಲ್ಲಿ ಮೊದಲ ಸಲ ಚಾಂಪಿಯನ್ ಆಗಿದ್ದರು.
ಬಲಿಷ್ಠ ಸರ್ವ್ಗಳ ಆಟ
ಒಂದು ದಿನದ ಹಿಂದಷ್ಟೇ ನವೋಮಿ ಒಸಾಕಾ ವಿರುದ್ಧ 3 ಗಂಟೆಗಳ ಹೋರಾಟ ನಡೆಸಿ ಸೆಮಿಫೈನಲ್ ಗೆದ್ದ ಪ್ಲಿಸ್ಕೋವಾಗೆ ಫೈನಲ್ನಲ್ಲೂ ಇಷ್ಟೇ ಕಠಿನ ಸವಾಲು ಎದುರಾಗಿತ್ತು. ಮೊದಲ ಸೆಟ್ನಲ್ಲಿ ಪ್ಲಿಸ್ಕೋವಾ ಮೇಲುಗೈ ಸಾಧಿಸಿದರು. ಬಳಿಕ ಕೀಸ್ ತಿರುಗಿ ಬಿದ್ದರು.
ನಿರ್ಣಾಯಕ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಪ್ಲಿಸ್ಕೋವಾ ಅಮೋಘ ಸರ್ವ್ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.
ಇದು ಪ್ಲಿಸ್ಕೋವಾ-ಕೀಸ್ ನಡುವೆ ನಡೆದ ಮೊದಲ ಮುಖಾಮುಖೀ ಎಂಬುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!