ಕಾಶ್ಮೀರ ಫುಟ್ಬಾಲ್ ಪಂದ್ಯಕ್ಕೆ ಪಂಜಾಬ್ ಗೈರು: ಶಿಸ್ತುಕ್ರಮ?
Team Udayavani, Feb 19, 2019, 12:30 AM IST
ಶ್ರೀನಗರ:ಶ್ರೀನಗರದಲ್ಲಿ ಸೋಮವಾರ ನಡೆಯಬೇಕಿದ್ದ, ರಿಯಲ್ ಕಾಶ್ಮೀರ ವಿರುದ್ಧದ ಐ-ಲೀಗ್ ಫುಟ್ಬಾಲ್ ಪಂದ್ಯಕ್ಕೆ ಮಿನರ್ವ ಪಂಜಾಬ್ ಗೈರಾಗಿದೆ. ಭದ್ರತಾ ಕಾರಣಗಳಿಂದ ನಾವು ಆಡುವುದಿಲ್ಲ ಎಂದು ಪಂಜಾಬ್ ಮೊದಲೇ ಘೋಷಿಸಿತ್ತು.
ಕಾಶ್ಮೀರದಲ್ಲಿ ಸ್ಫೋಟ ನಡೆದಿದ್ದರೂ, ಭದ್ರತಾ ಪಡೆಗಳ ನೆರವಿನೊಂದಿಗೆ ಐ- ಲೀಗ್ ಪಂದ್ಯ ನಡೆಸುವುದಾಗಿ ಎಐಎಫ್ಎಫ್ ತಿಳಿಸಿತ್ತು. ಆದರೂ ಗೈರಾಗಿರುವುದರಿಂದ ಐ-ಲೀಗ್ ನಿಯಮಾವಳಿಗಂತೆ ಅದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಲೀಗ್ ಆಯುಕ್ತರಿಗೆ ದಾಖಲೆ ಸಲ್ಲಿಸಲಾಗಿದೆ.ಪಂಜಾಬ್ ತಂಡದಲ್ಲಿನ ವಿದೇಶಿ ಆಟಗಾರರಿಗೆ ಕಾಶ್ಮೀರಕ್ಕೆ ತೆರಳದಿರುವಂತೆ ಆಯಾದೇಶಗಳಿಂದಲೇ ಸೂಚನೆ ಕೂಡ ಬಂದಿದೆ.