10 ವಿಕೆಟ್‌ ಹಾರಿಸಿದ ಕಶ್ವಿ‌ ಗೌತಮ್‌

Team Udayavani, Feb 26, 2020, 1:23 AM IST

ಕಡಪ: ಚಂಡೀಗಢ ವನಿತಾ ಅಂಡರ್‌-19 ಕ್ರಿಕೆಟ್‌ ತಂಡದ ನಾಯಕಿ ಕಶ್ವಿ‌ ಗೌತಮ್‌ ವಿಶಿಷ್ಟ ದಾಖಲೆಯೊಂದಿಗೆ ಸುದ್ದಿಯಾಗಿದ್ದಾರೆ. ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಉರುಳಿಸಿದ ಭಾರತದ ಮೊದಲ ಬೌಲರ್‌ ಆಗಿ ಮೂಡಿಬಂದಿದ್ದಾರೆ.

ಕಡಪದಲ್ಲಿ ನಡೆದ ಅರುಣಾಚಲಪ್ರದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕಶ್ವಿ‌ ಕೇವಲ 29 ಎಸೆತಗಳಲ್ಲಿ 12 ರನ್‌ ನೀಡಿ ಈ ಸಾಧನೆಗೈದರು. 4.5 ಓವರ್‌ ಎಸೆದ ಅವರು ಒಂದು ಮೇಡನ್‌ ಮಾಡಿ, 12 ರನ್‌ ವೆಚ್ಚದಲ್ಲಿ ಅರುಣಾಚಲಪ್ರದೇಶ ತಂಡದ ಎಲ್ಲ 10 ವಿಕೆಟ್‌ ಉಡಾಯಿಸಿದರು. ಇದರಲ್ಲಿ 4 ಬೌಲ್ಡ್‌ ಹಾಗೂ 6 ಲೆಗ್‌ ಬಿಫೋರ್‌ ರೂಪದಲ್ಲಿ ಬಂದವು. 8 ಆಟಗಾರ್ತಿಯರು ರನ್‌ ಖಾತೆಯನ್ನೇ ತೆರೆಯಲಿಲ್ಲ. ಇನ್ನೂ ವಿಶೇಷವೆಂದರೆ, ಇದರಲ್ಲಿ ಹ್ಯಾಟ್ರಿಕ್‌ ಕೂಡ ಒಳಗೊಂಡಿತ್ತು!

ಕಶ್ವಿ‌ ಗೌತಮ್‌ ದಾಳಿಗೆ ಸಿಲುಕಿದ ಅರುಣಾಚಲಪ್ರದೇಶ 25 ರನ್ನಿಗೆ ಆಲೌಟ್‌ ಆಯಿತು. ಚಂಡೀಗಢ 161 ರನ್ನುಗಳ ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗಿನಲ್ಲೂ ಮಿಂಚಿದ ಕಶ್ವಿ‌ ಚಂಡೀಗಢ ಪರ ಸರ್ವಾಧಿಕ 49 ರನ್‌ ಬಾರಿಸಿದರು. ಇದರಲ್ಲಿ 6 ಬೌಂಡರಿಗಳಿದ್ದವು. ಚಂಡೀಗಢ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟಿಗೆ 186 ರನ್‌ ಗಳಿಸಿತ್ತು.

ಕಶ್ವಿ‌ ಗೌತಮ್‌ ಈ ಸಾಧನೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರ ವಿರುದ್ಧ 7 ವಿಕೆಟ್‌ ಹಾರಿಸಿದ್ದರು. ಇದರೊಂದಿಗೆ 3 ಪಂದ್ಯಗಳಿಂದ ಅವರ ವಿಕೆಟ್‌ ಗಳಿಕೆ 18ಕ್ಕೆ ಏರಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ