ಚೀನ ಓಪನ್‌: ಕಶ್ಯಪ್‌,ಪ್ರಣೀತ್‌ ಪರಾಭವ

ಮಿಕ್ಸೆಡ್‌ ಡಬಲ್ಸ್‌: ರಾಂಕಿ ರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಜೋಡಿ ಔಟ್‌

Team Udayavani, Nov 8, 2019, 5:30 AM IST

ಫ‌ುಝು (ಚೀನ): “ಚೀನ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್‌ ಶಟ್ಲರ್‌ಗಳ ಸೋಲಿನ ಆಟ ಮುಂದುವರಿದಿದೆ. ಪಾರುಪಳ್ಳಿ ಕಶ್ಯಪ್‌, ಬಿ. ಸಾಯಿ ಪ್ರಣೀತ್‌ ಪುರುಷರ ಸಿಂಗಲ್ಸ್‌ ಸ್ಪರ್ಧೆಯ ದ್ವಿತೀಯ ಸುತ್ತಿನಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ.

ಗುರುವಾರ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಪ್ರಣೀತ್‌ ಡೆನ್ಮಾರ್ಕ್‌ನ ಆ್ಯಂಡ್ರೆಸ್‌ ಆ್ಯಂಟೆನ್ಸೆನ್‌ ವಿರುದ್ಧ 22-20, 20-22, 16-21 ಅಂತರದಿಂದ ಸೋಲು ಕಾಣಬೇಕಾಯಿತು. ಇವರಿಬ್ಬರ ಕಾದಾಟ ಒಂದು ಗಂಟೆ, 24 ನಿಮಿಷಗಳ ಕಾಲ ಸಾಗಿತು.

ಪಿ. ಕಶ್ಯಪ್‌ ಸೋಲು
ದ್ವಿತೀಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್‌ ಡೆನ್ಮಾರ್ಕ್‌ನ ವಿಕ್ಟರ್‌ ಅಲೆಕ್ಸನ್‌ ವಿರುದ್ಧ 13-21, 19-21 ನೇರ ಗೇಮ್‌ಗಳ ಸೋಲನುಭವಿಸಿದರು. 43 ನಿಮಿಷಗಳ ವರೆಗೆ ಈ ಹೋರಾಟ ಸಾಗಿತು. ಈ ಸೋಲಿನೊಂದಿಗೆ ಕಶ್ಯಪ್‌ ಒಂದೇ ವರ್ಷದಲ್ಲಿ ಅಲೆಕ್ಸನ್‌ ವಿರುದ್ಧ 2ನೇ ಬಾರಿ ಮುಗ್ಗರಿಸಿದಂತಾಯಿತು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಶ್ರೆಯಾಂಕ ರಹಿತ ಸಾತ್ವಿಕ್‌ರಾಜ್‌ ರಾಂಕಿ ರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಜೋಡಿ ಕೊರಿಯಾದ 5ನೇ ಶ್ರೆಯಾಂಕದ ಸಿಯೋ ಸೆಯಾಂಗ್‌ ಜೇ- ಚೇ ಯುಜುಂಗ್‌ ವಿರುದ್ಧ 21-23, 16-21 ಅಂತರದಿಂದ ಪರಾಭವಗೊಂಡಿತು.

ಕ್ವಾರ್ಟರ್‌ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌
ಸಾತ್ವಿಕ್‌ರಾಜ್‌ ರಾಂಕಿ ರೆಡ್ಡಿ-ಚಿರಾಗ್‌ ಶೆಟ್ಟಿ ಪುರುಷರ ಡಬಲ್ಸ್‌ ವಿಭಾಗದಲ್ಲಿ 6ನೇ ಶ್ರೇಯಾಂಕಿತ ಜಪಾನಿನ ಹಿರೋಯುಕಿ ಎಂಡೊ-ಯುಟ ವಟಾನಬೆ ವಿರುದ್ಧ 21-18, 21-23, 21-11 ಅಂತರದ ಜಯ ಸಾಧಿಸಿ “ಚೀನ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕಳೆದ ತಿಂಗಳು ನಡೆದ ಫ್ರೆಂಚ್‌ ಓಪನ್‌ನಲ್ಲಿ ಬೆಳ್ಳಿ ಪದಕ ವಿಜೇತ ಈ ಜೋಡಿ ಪ್ರಸಕ್ತ ಕೂಟದಲ್ಲಿ ಭಾರತದ ಭರವಸೆಯಾಗಿ ಉಳಿದಿದೆ.

ಶುಕ್ರವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ಚೀನದ ಲೀ ಜುನ್‌ ಹುಯಿ-ಲಿಯು ಯು ಚೆನ್‌ ವಿರುದ್ಧ ಸೆಣಸಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ