ಕೊಲಂಬೊದಲ್ಲಿ ಕೆ.ಎಲ್.ರಾಹುಲ್ ಮಿಡ್ವೀಕ್ ಚಿಲ್ಸ್
Team Udayavani, Mar 18, 2018, 6:40 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಪ್ರತಿ ಗೆಲುವಿನ ನಂತರ ಒಂದು ಸಂಭ್ರಮಕ್ಕಾಗಿ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಾರೆ. ಅಂತೆಯೆ ಟ20 ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಕೆ.ಎಲ್.ರಾಹುಲ್ ಸೇರಿದಂತೆ ಭಾರತ ತಂಡದ ಕೆಲ ಕ್ರಿಕೆಟಿಗರು ಕೊಲಂಬೊದ ಸುಂದರ ತಾಣವೊಂದರಲ್ಲಿ ಮಸ್ತ್ ಮಜಾ ಮಾಡಿದ್ದಾರೆ.
ಈ ಫೋಟೋವನ್ನು ರಾಹುಲ್ ತಮ್ಮ ಅಧಿಕೃತ ಟ್ವೀಟರ್ನಲ್ಲಿ ಮಿಡ್ವೀಕ್ ಚಿಲ್ಸ್ ಎಂದು ಪ್ರಕಟಿಸಿದ್ದಾರೆ. ಭಾರತ ಬಾಂಗ್ಲಾದೇಶದ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಈ ನಡುವೆ ಫೈನಲ್ಗೂ ಮುನ್ನ ಭಾರತೀಯರಿಗೆ 4 ದಿನ ವಿಶ್ರಾಂತಿ ಸಿಕ್ಕಿದೆ.